70 ಸಾವಿರ ಕೋಟಿ ರೂ. ಅಕ್ರಮ? | Illegal

illegal
Published on

ನವದೆಹಲಿ: ಚೀನಾದ ಮೊಬೈಲ್ ಫೋನ್ ಕಂಪನಿ ವಿವೋ ‘ಆಮದಿನ ನೆಪದಲ್ಲಿ’ ಭಾರತದಿಂದ 70,837 ಕೋಟಿ ರೂ. ವಂಚಿಸಿದೆಯಲ್ಲದೆ ಇನ್ನೂ ಹಲವು ಅಕ್ರಮಗಳನ್ನು (Illegal) ನಡೆಸಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಫೆಬ್ರವರಿಯಲ್ಲಿ ಸಲ್ಲಿಸಿರುವ ಪೂರಕ ಆರೋಪಪಟ್ಟಿಯಲ್ಲಿ ತಿಳಿಸಿದೆ.

‘ಹಾಂಕಾಂಗ್​ನ ಕಟ್ಟಡವೊಂದರ ರೂಂ. ನಂ. 901ರಿಂದ ವಿವೋ ಇಂಡಿಯಾವನ್ನು ನಿಯಂತ್ರಿಸ ಲಾಗುತ್ತಿದೆ’ ಎಂಬುದು ಕಂಪನಿ ವಿರುದ್ಧದ ಇನ್ನೊಂದು ಪ್ರಮುಖ ಆರೋಪವಾಗಿದೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಆಗಸ್ಟ್​ನಲ್ಲಿ ವಿಚಾರಣೆಗಾಗಿ ಇ.ಡಿ. ಕರೆಸಿತ್ತು. ವಿವೋ ಮೊಬೈಲ್ ಇಂಡಿಯಾ ಪ್ರೖೆವೇಟ್ ಲಿಮಿಟೆಡ್ 2014ರಿಂದೀಚೆಗೆ 70,837 ರೂ.ಗಳನ್ನು ಭಾರತದಿಂದ ಹೊರಗೆ ಕಳಿಸಿದೆ ಎಂದು ಇ.ಡಿ. ಹೇಳಿದೆ.

ವಿವೋ ಇಂಡಿಯಾ ಮತ್ತು ಅದರ 23 ಸ್ಟೇಟ್ ಡಿಸ್ಟ್ರಿಬ್ಯೂಟರ್ ಕಂಪನಿಗಳ (ಎಸ್​ಡಿಸಿ) ಮೂಲಕ ವಿವೋ ಚೀನಾ ಭಾರತದಲ್ಲಿನ ಎಲ್ಲ ವಿವೋ ಮೊಬೈಲ್​ಗಳನ್ನು ನಿಯಂತ್ರಿಸಿದೆ ಹಾಗೂ ಏಕಸ್ವಾಮ್ಯ ಹೊಂದಿದೆ ಎಂದು ಪೂರಕ ಚಾರ್ಜ್ ಶೀಟ್​ನಲ್ಲಿ ಇ.ಡಿ. ಹೇಳಿದೆ. ಹಾಂಕಾಂಗ್, ಸಮೋವಾ ಮತ್ತು ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್​ನ ಕಂಪನಿಗಳಿಂದ ಮಾಡಿಕೊಳ್ಳಲಾದ ಆಮದಿನ ನೆಪದಲ್ಲಿ ದೊಡ್ಡ ಮೊತ್ತದ ಹಣವನ್ನು ವಂಚಿಸಲಾಗಿದೆ ಎಂದು ಇ.ಡಿ. ಆರೋಪಿಸಿದೆ. ಇವುಗಳಲ್ಲಿನ ಹಲವು ವಿದೇಶಿ ‘ಟ್ರೇಡಿಂಗ್ ಕಂಪನಿಗಳನ್ನು’ ವಿವೋ ಚೀನಾ ನಿಯಂತ್ರಿಸುತ್ತಿದೆ ಎಂದು ಇ.ಡಿ ಹೇಳಿದೆ. ಈ ಬಾಬ್ತಿನಲ್ಲಿ ಆಗಿರುವ ವಂಚನೆ ಮೊತ್ತ 20,241 ಕೋಟಿ ರೂಪಾಯಿಯಾಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net