ಮಗ ಸತ್ತ 7 ವರ್ಷಗಳ ನಂತ್ರ ತಂದೆ ತಾಯಿಗಳಿಬ್ಬರ ಬರ್ಬರ ಹತ್ಯೆ!ಮುಂದೇನಾಯ್ತು? Heartbreaking Incident

Heartbreaking Incident
Published on

Heartbreaking Incident | ಸಿಬಿಐ ತಮ್ಮ ಮಗನ ನಿಗೂಢ ಸಾವಿನ ತನಿಖೆ ಆರಂಭಿಸಿದ ಕೇವಲ ಒಂದು ತಿಂಗಳೊಳಗೆ ವೃದ್ಧ ದಂಪತಿಗಳನ್ನು ಮನೆಯಲ್ಲಿಯೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ನಡೆದಿದೆ.

ಕೊಟ್ಟಾಯಂನ ತಿರುವತ್ತುಕ್ಕಲ್ ಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಟಿ.ಕೆ. ವಿಜಯ್‌ಕುಮಾರ್(64) ಮತ್ತು ಅವರ ಪತ್ನಿ ಮೀರಾ (60) ಮಂಗಳವಾರ (ಏ.22) ಬೆಳಿಗ್ಗೆ ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮನೆಕೆಲಸದವಳು ಎಂದಿನಂತೆ ಕೆಲಸಕ್ಕೆ ಬಂದಾಗ ಇಬ್ಬರ ಶವಗಳನ್ನು ನೋಡಿ ಪೊಲೀಸರಿಗೆ ತಿಳಿಸಿದ್ದಾರೆ.

ನಡೆದಿದ್ದೇನು ಗೊತ್ತಾ?

ವಿಜಯಕುಮಾರ್ ಒಬ್ಬರು ಸಮಾವೇಶ ಕೇಂದ್ರದ ಮಾಲೀಕರಾಗಿದ್ದರು ಹಾಗೂ ಅವರ ಮಗ ಗೌತಮ್ ತಿರುವನಂತಪುರದ ಟೆಕ್ನೋಪಾರ್ಕ್‌ನಲ್ಲಿ ಉದ್ಯಮಿಯಾಗಿದ್ದನು. ಅದರೆ ಅವನು ಜೂನ್ 3, 2017 ರಂದು ಸ್ನೇಹಿತನನ್ನು ಭೇಟಿಯಾಗಲು ಮನೆಯಿಂದ ಹೊರಟಿದ್ದರು ರೈಲ್ವೆ ಹಳಿಗಳ ಮೇಲೆ ಶವವಾಗಿ ಪತ್ತೆಯಾಗಿದ್ದರು.

ಎಷ್ಟೇ ದಿನ ಕಳೆದರೂ ಗೌತಮ್ ಸಾವಿನ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿ ಲಭ್ಯವಿರಲಿಲ್ಲ, ನಂತರ ಅವರ ತಂದೆ ವಿಜಯಕುಮಾರ್ ಸಿಬಿಐ ತನಿಖೆಗೆ ಹೈಕೋರ್ಟ್‌ನಲ್ಲಿ ಒತ್ತಾಯಿಸಿದರು. ನ್ಯಾಯಾಲಯವು ಫೆಬ್ರವರಿ 19, 2025 ರಂದು ಸಿಬಿಐ ತನಿಖೆಗೆ ಆದೇಶಿಸಿತು ಮತ್ತು ಮಾರ್ಚ್ 21 ರಂದು ಈ ಪ್ರಕರಣದ ಮೇಲೆ ಎಫ್‌ಐಆರ್ ದಾಖಲಿಸಲಾಯಿತು.

ಆದರೆ ಈಗ ತನಿಖಾ ಪ್ರಕ್ರಿಯೆ ಆರಂಭವಾಗಿರುವಾಗಲೇ ಈ ಕ್ರೂರ ಘಟನೆ ನಡೆದಿದೆ. ಅವರ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು ಜೊತೆಗೆ ಎರಡು ಕಾವಲು ನಾಯಿಗಳು ಸಹ ಇದ್ದವು. ಆದರೆ ಡಿವಿಆರ್ ಕದ್ದಿ, ನಾಯಿಗಳಿಗೆ ಔಷಧಿ ನೀಡಿ ಪ್ರಜ್ಞೆ ತಪ್ಪಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮೃತದೇಹಗಳ ಮೇಲೆ ಗಂಭೀರ ಗಾಯದ ಗುರುತು

ವೃದ್ಧರ ಶವಗಳು ಕೋಣೆಗಳಲ್ಲಿ ಪತ್ತೆಯಾಗಿದ್ದು, ಅವರ ದೇಹದ ಮೇಲೆ ಗಂಭೀರವಾದ ಗಾಯದ ಗುರುತುಗಳಿದ್ದವು. ಕೊಲೆಯಾದ ಸ್ಥಳದಿಂದ ಒಂದು ಕೊಡಲಿಯನ್ನು ಸಹ ವಶಪಡಿಸಿಕೊಳ್ಳಲಾಗಿದೆ ಅದನ್ನು ಕೊಲೆಗೆ ಬಳಸಲಾಗಿದೆ. ತನಿಖೆ ಇನ್ನೂ ಮುಂದುವರೆದಿದ್ದು, ಇದರ ಆಳವಾಗಿ ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸ್​​​ ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net