ಜೂಜಾಡುತ್ತಿದ್ದ 7 ಮಂದಿ ಬಂಧನ

klr juju
ಜೂಜು ಆಡುತಿದ್ದವರನ್ನು ಬಂಧಿಸಿರುವ ಪೊಲೀಸರು.
Published on

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಆಲಂಬಗಿರಿ ಗ್ರಾಮದ ಸಮೀಪ ಶನಿವಾರ ಜೂಜಾಡುತ್ತಿದ್ದ 7 ಮಂದಿಯನ್ನು ಪೊಲೀಸರು ಬಂಧಿಸಿದ್ದು, 42,200 ರೂ. ನಗದು, 4 ದ್ವಿ ಚಕ್ರವಾಹನ ವಶಕ್ಕೆಪಡೆದಿದ್ದಾರೆ.

ಆಲಂಗಿರಿ ನರಸಿಂಹ ಮೂರ್ತಿ (41), ಶ್ರೀನಿವಾಸಪುರದ ವೆಂಕಟೇಶ್ವರ ಬಡಾವಣೆಯ ಅಮರನಾಥ (46), ಸುರೇಶ (40) ದೇವಲಪಲ್ಲಿ ಸುತೇಶ್ (38), ಶಂಶೆಟ್ಟಿಹಳ್ಳಿ ಮಂಜುನಾಥ್(38), ಚಿಂತಾಮಣಿ ತಾಲೂಕಿನ ಬಾರ್ಲಹಳ್ಳಿ ಮಲ್ಲಿಕಾರ್ಜುನ, ಆದಿಗಿರಿ ಚಂದ್ರಪ್ಪ ಬಂಧಿತರು.
ಆಲಂಬಗಿರಿ ಸಮೀಪ ಶನಿವಾರ 7 ಮಂದಿ ಗುಂಪು ಕಟ್ಟಿಕೊಂಡು ಇಸ್ಪೀಟ್ ಆಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ನಂದಕುಮಾರ್, ಸಿಪಿಐಗಳಾದ ಸತೀಶ್, ಎಂ.ಬಿ.ಗೋರವಿನಕೊಳ್ಳ, ಪಿಎಸ್‌ಐಗಳಾದ ವಿಠ್ಠಲ, ಯೋಗೀಶ್ ಕುಮಾರ್ ಕಾರ್ಯಾಚರಣೆ ನಡೆಸಿ, ಆರೋಪಿಗಳು ವಶಕ್ಕೆ ಪಡೆದಿದ್ದಾರೆ. ಶ್ರೀನಿವಾಸಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net