ಗುತ್ತಿಗೆದಾರನಿಂದ ತಪ್ಪಿಸಿಕೊಳ್ಳಲು ಹೋಗಿ ಕಾಡಿನಲ್ಲಿ ನಾಪತ್ತೆಯಾಗಿದ್ದ 7 ಕಾರ್ಮಿಕರು ಪತ್ತೆ: ಉಳಿದವರಿಗಾಗಿ ತೀವ್ರ ಹುಡುಕಾಟ

IAF
Published on

ಇಟಾನಗರ: ಭಾರತ-ಚೀನಾ ಗಡಿಯಲ್ಲಿ ಕಳೆದ 18 ದಿನಗಳ ಹಿಂದೆ ನಾಪತ್ತೆಯಾಗಿದ್ದ ಕಾರ್ಮಿಕರಿಗಾಗಿ ಕೈಗೊಂಡಿರುವ ಶೋಧ ಕಾರ್ಯಾಚರಣೆ ವೇಳೆ ಏಳು ಕಾರ್ಮಿಕರು ಕೊನೆಗೂ ಪತ್ತೆಯಾಗಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಅರುಣಾಚಲ ಪ್ರದೇಶದ ಕರಂಗ್​ ಕುಮೆ ಜಿಲ್ಲೆಯ ಗಡಿಯ ಅರಣ್ಯ ಪ್ರದೇಶದಲ್ಲಿ 19 ಕಾರ್ಮಿಕರು ನಾಪತ್ತೆಯಾಗಿದ್ದರು. ವಾಯುಸೇನೆ ಹೆಲಿಕಾಪ್ಟರ್​ ಸಹಾಯದೊಂದಿಗೆ ಶೋಧ ಕಾರ್ಯ ಆರಂಭಿಸಲಾಗಿತ್ತು, ಇದೀಗ 7ಕಾರ್ಮಿಕರು ತೀವ್ರ ಅಸ್ವಸ್ಥ ರೀತಿಯಲ್ಲಿ ಕಂಡುಬಂದಿದ್ದು, ಕೂಡಲೇ ಅವರನ್ನು ಹೆಲಿಕಾಪ್ಟರ್​ ಮೂಲಕವೇ ಆಸ್ಪತ್ರೆಗೆ ರವಾನಿಸಲಾಗಿದೆ.

ಎನ್​ಡಿಆರ್​ಎಫ್​ ತಂಡದಿಂದ ತೀವ್ರ ಶೋಧ ನಡೆಸಲಾಗುತ್ತಿದ್ದು, ಈ ಬಗ್ಗೆ ಲೋಕಸಭಾ ಸದಸ್ಯ ಗೌರವ್​ ಗಗೋಯಿ ಅವರು ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​ ಅವರಿಗೆ ಮಾಹಿತಿ ನೀಡಿದ್ದಾರೆ. ಈ ಕಾರ್ಮಿಕರೆಲ್ಲರೂ ಅಸ್ಸಾಂ ಮೂಲದವರಾಗಿದ್ದು, ರಸ್ತೆ ಕಾಮಗಾರಿ ಕೆಲಸ ಮಾಡುತ್ತಿದ್ದ ಈ ಕಾರ್ಮಿಕರು ಕೆಲಸ ಮುಗಿದ ಬಳಿಕ ಅಲ್ಲಿಂದ ನಾಪತ್ತೆಯಾಗಿದ್ದರು.

ರಸ್ತೆ ಕಾಮಗಾರಿ ಮಾಡುತ್ತಿದ್ದ ಕಾರ್ಮಿಕರು ಕೆಲಸ ಮುಗಿದ ಬಳಿಕ ಗುತ್ತಿಗೆದಾರರಿಂದ ತಪ್ಪಿಸಿಕೊಳ್ಳಲು ತಮ್ಮಲ್ಲೇ ಎರಡು ಗುಂಪು ಮಾಡಿಕೊಂಡಿದ್ದಾರೆ. ಈ ವೇಳೆ ಕಾಡಿನ ಮೂಲಕ ಕಾಲ್ನಡಿಗೆಯಲ್ಲೇ ಅಸ್ಸಾಂ ಕಡೆಗೆ ಹೋಗಲು ನಿರ್ಧರಿಸಿದ್ದಾರೆ. ಆದರೆ ದಾರಿ ತಪ್ಪಿದ್ದರಿಂದ ಇಷ್ಟು ದಿನ ಕಾಡಿನಲ್ಲೇ ಸಿಲುಕಿಕೊಂಡಿದ್ದರು. ಆದರೆ ಇಷ್ಟು ದಿನ ಆಹಾರ ನೀರಿಲ್ಲದೇ ಹೇಗೆ ಬದುಕಿದರು ಎಂಬ ಬಗ್ಗೆ ಮಾಹಿತಿ ಇನ್ನೂ ದೊರೆತಿಲ್ಲ.

ಗೊತ್ತಾಗಿದ್ದು ಹೇಗೆ: ಜುಲೈ 5ರಂದು ಕೆಲಸದ ಸ್ಥಳದಿಂದ ನಾಪತ್ತೆಯಾಗಿದ್ದ ಈ ಕಾರ್ಮಿಕರು ಪತ್ತೆಯಾಗಿದ್ದು ಬರೋಬ್ಬರಿ 18 ದಿನಗಳ ನಂತರ. ಇಷ್ಟೂ ದಿನ ಈ ಎಲ್ಲರೂ ಹೇಗೆ ಬದುಕಿದ್ದರು ಎಂಬುದು ರೋಚಕವಾಗಿದೆ. ಇನ್ನು ಈ ಕಾರ್ಮಿಕರು ಕೆಲಸ ಸ್ಥಳದಿಂದ ನಾಪತ್ತೆಯಾಗಿ ಮಾರನೇ ದಿನ ಕೆಲಸಕ್ಕೆ ಬಾರದಿದ್ದಾಗ ಅವರ ಕುಟುಂಬದವರನ್ನು ವಿಚಾರಿಸಲಾಗಿದೆ. ಅಲ್ಲಿಗೂ ಹೋಗಿಲ್ಲ ಎಂದು ತಿಳಿದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ, ನಂತರ ರಾಜ್ಯ ವಿಪತ್ತು ನಿರ್ವಹಣಾ ಪಡೆಯಿಂದ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು.

ಕೆಲಸದ ಸ್ಥಳದಿಂದ ತೆರಳಿದ ನಂತರ ಅವರು ಎರಡು ಗುಂಪುಗಳಾಗಿ ವಿಂಗಡಿಸಿದ್ದಾರೆ ಮತ್ತು ತಮ್ಮ ಗುತ್ತಿಗೆದಾರರಿಂದ ಸಿಕ್ಕಿಬೀಳಲು ಬಯಸದ ಕಾರಣ ಕಾಡಿನ ಮೂಲಕ ಕಾಲ್ನಡಿಗೆಯಲ್ಲಿ ಅಸ್ಸಾಂ ಕಡೆಗೆ ಹೋಗಲು ನಿರ್ಧರಿಸಿದ್ದಾರೆ ಎಂದು ಅವರು ಹೇಳಿದರು. ಆದರೆ ಶೀಘ್ರದಲ್ಲೇ ಅವರು ದಾರಿ ತಪ್ಪಿದರು. ಇಷ್ಟು ದಿನ ಅವರು ಹೇಗೆ ಬದುಕಿದರು ಎಂಬ ಬಗ್ಗೆ ಮಾಹಿತಿ ಇಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net