

Dogs : 7 ಬೀದಿ ನಾಯಿಗಳ ಗುಂಪೊಂದು ಓರ್ವ ವ್ಯಕ್ತಿಯ ಮೇಲೆ ದಾಳಿ ನಡೆಸಿರುವ ಘಟನೆ ಮಹಾರಾಷ್ಟ್ರದ ಪಿಂಪ್ರಿ ಚಿಂಚ್ವಾಡ್ನಲ್ಲಿ ಶನಿವಾರ (ಆಗಸ್ಟ್ 23) ರ ಬೆಳಿಗ್ಗೆ 5 ಗಂಟೆಗೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವ್ಯಕ್ತಿಯು ಕೆಲಸಕ್ಕೆಂದು ಓಣಿಯಲ್ಲಿ ನಡೆದುಕೊಂಡು ಹೋಗುವ ಸಂದರ್ಭದಲ್ಲಿ 7 ಬೀದಿನಾಯಿಗಳು ಆತನ ಹಿಂದೆ ಓಡುವುದನ್ನು ಈ ವಿಡಿಯೋ ತೋರಿಸುತ್ತದೆ. ಇನ್ನು ನಾಯಿಗಳ ಗುಂಪು ಆತನನ್ನು ಕಚ್ಚಲು ಪ್ರಯತ್ನಿಸಿದ್ದು, ಇವುಗಳಿಂದ ತಪ್ಪಿಸಿಕೊಳ್ಳಲು ಯುವಕ ಬೈಕ್ ಹಿಂದೆ ನಿಲ್ಲುತ್ತಾನೆ. ಆ ವೇಳೆ ಈ ನಾಯಿಗಳು ಆತನನ್ನು ಬಿಡದೇ ಕಚ್ಚಲು ಹೋಗಿದ್ದು, ಅವುಗಳಿಂದ ರಕ್ಷಣೆ ಮಾಡಿಕೊಳ್ಳಲು ಬೈಕ್ನ್ನು ನಾಯಿಗಳ ಮೇಲೆ ತಳ್ಳಿದನು. ಈ ವೇಳೆ ನಾಯಿಗಳಿಗೆ ಯಾವುದೇ ರೀತಿಯಲ್ಲೂ ಹಾನಿಯಾಗಿಲ್ಲ.
ಇದೇ ಸಮಯದಲ್ಲಿ ಹತ್ತಿರದಲ್ಲಿ ವಾಸಿಸುತ್ತಿದ್ದ ಮನೆಯವರು ಹೊರಗೆ ಬಂದಿದ್ದು, ನಾಯಿಗಳನ್ನು ಓಡಿಸಿ ಯುವಕನ ರಕ್ಷಣೆ ಮಾಡಲು ಮುಂದಾಗಿದ್ದಾರೆ. ಇನ್ನು ನಾಯಿಗಳು ಆತನನ್ನು ಬಿಟ್ಟು, ಬೇರೆ ಕಡೆ ಹೋಗಿದ್ದಾವೆ.
ದಾಳಿಯಲ್ಲಿ ವ್ಯಕ್ತಿ ನಾಯಿಯಿಂದ ಹಾನಿಗೊಳಗಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಸ್ಥಳೀಯರು ಈ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಬೇಕೆಂದು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
(ಏಜೆನ್ಸೀಸ್)