7.60 ಲಕ್ಷ ರೂ. ಮೌಲ್ಯದ ಪಟಾಕಿ ವಶ

Pataki
ಗೋದಾಮಿನಲ್ಲಿದ್ದ ಪಟಾಕಿ ವಶಪಡಿಸಿಕೊಂಡಿರುವುದು.
Published on

ಚಿಕ್ಕಮಗಳೂರು: ಪರವಾನಗಿ ಇಲ್ಲದೆ ಪಟಾಕಿ ಸಂಗ್ರಹ ಮಾಡಲಾಗಿದ್ದ ನಗರದ ಗೋದಾಮು, ಮಳಿಗೆಗಳ ಮೇಲೆ ಎಸಿ, ತಹಸೀಲ್ದಾರ್ ಹಾಗೂ ಪೊಲೀಸರು ದಾಳಿ ಮಾಡಿ ಲಕ್ಷಾಂತರ ರೂ. ಮೌಲ್ಯದ ಪಟಾಕಿ ವಶಕ್ಕೆ ಪಡೆದಿದ್ದಾರೆ.

ಅಕ್ರಮವಾಗಿ ಪಟಾಕಿ ದಾಸ್ತಾನು ಮಾಡಲಾಗಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಬುಧವಾರ ಅಧಿಕಾರಿಗಳ ತಂಡ ಚಿಕ್ಕಮಗಳೂರು ನಗರದ ಮೂರು ಕಡೆ ದಾಳಿ ನಡೆಸಿ 7.60 ಲಕ್ಷ ರೂ. ಮೌಲ್ಯದ ಪಟಾಕಿ ವಶಕ್ಕೆ ಪಡೆದಿದೆ.
ಹಾಲೇನಹಳ್ಳಿ ವಿಜಯದುರ್ಗ ದೇವಸ್ಥಾನದ ಆವರಣದಲ್ಲಿರುವ ಗೋದಾಮಿನಲ್ಲಿದ್ದ 4 ಲಕ್ಷ ರೂ. ಮೌಲ್ಯದ, ಶರೀಫ್ ಗಲ್ಲಿ ಗೋದಾಮಿನಲ್ಲಿ 3.50 ಲಕ್ಷ ರೂ. ಮೌಲ್ಯದ, ಬಿ.ಎಂ.ರಸ್ತೆ ಮಂಜುನಾಥ ಸ್ಟೋರ್ಸ್‌ ಮಳಿಗೆಯಲ್ಲಿದ್ದ ಒಂದು ಲಕ್ಷ ರೂ. ಮೌಲ್ಯದ ಪಟಾಕಿ ವಶಕ್ಕೆ ಪಡೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net