6ರಂದು ನಾಮಧಾರಿಗೌಡ ಯುವಕ ಸಂಘದ ವಾರ್ಷಿಕ ಸಭೆ

Published on

ಸರಗೂರು: ಎಚ್.ಡಿ.ಕೋಟೆ ಹಾಗೂ ಸರಗೂರು ತಾಲೂಕು ನಾಮಧಾರಿಗೌಡ ಯುವಕ ಸಂಘದ 15ನೇ ವರ್ಷದ ವಾರ್ಷಿಕ ಸಭೆ ಜುಲೈ 6ರಂದು ಬೆಳಗ್ಗೆ 10 ಗಂಟೆಗೆ ಸರಗೂರು ಪಟ್ಟಣದ ನಾಮಧಾರಿಗೌಡ ಸಮುದಾಯ ಭವನದಲ್ಲಿ ಜರುಗಲಿದೆ.

ಸಭೆಯನ್ನು ಸಮಾಜದ ತಾಲೂಕು ಸಮಿತಿ ಅಧ್ಯಕ್ಷ ಭೀಮ್‌ರಾಜ್ ಉದ್ಘಾಟಿಸುವರು. ವಿಶೇಷ ಆಹ್ವಾನಿತರಾಗಿ ನಿವೃತ್ತ ಕೃಷಿ ಅಧಿಕಾರಿ ಕೃಷ್ಣಯ್ಯ, ಹಿರಿಯ ಪತ್ರಕರ್ತ ಎಂ.ಸುಬ್ರಹ್ಮಣ್ಯ ಭಾಗವಹಿಸುವರು. ಸಂಘದ ಅಧ್ಯಕ್ಷ ಭರತ್ ಚಾಮರಾಜು ಅಧ್ಯಕ್ಷತೆ ವಹಿಸುವರು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳಿಸಿರುವ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ನಂತರ ಸಂಘದ ವಾರ್ಷಿಕ ಲೆಕ್ಕಪತ್ರ ಮಂಡನೆ ಮಾಡಲಾಗುವುದು. ಎರಡು ತಾಲೂಕುಗಳಲ್ಲಿ ಪ್ರಬಲ ಸಮುದಾಯವಾಗಿದ್ದು ನಾಮಧಾರಿಗೌಡ ಜನಾಂಗದ ಯುವಕ ಸಂಘವು ಅನೇಕ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ತರಗತಿಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಪ್ರತಿಭಾ ಪುರಸ್ಕಾರ ನೀಡುತ್ತಿದ್ದೇವೆ ಎಂದು ಸಂಘದ ಅಧ್ಯಕ್ಷ ಭರತ್ ಚಾಮರಾಜು ಹಾಗೂ ಕಾರ್ಯದರ್ಶಿ ಅಮೀತ್ ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net