ಸೀರೆಯುಟ್ಟು ಪ್ಯಾರಾಗ್ಲೈಡಿಂಗ್ ಮಾಡಿದ 67 ವರ್ಷದ ಅಜ್ಜಿ

viral video
Published on

ಹಾಸನ: ಡೊರೊಥಿ ಹಾಫ್ನರ್​ ಎಂಬ 104 ವಯಸ್ಸಿನ ವೃದ್ಧೆಯೊಬ್ಬರು ಸ್ಕೈಡೈವ್ ಮಾಡಿ ಗಿನ್ನೆಸ್​ ಬುಕ್​ ರೆಕಾರ್ಡ್​ನಲ್ಲಿ ದಾಖಲಾಗಿದ್ದರು. ಈಗ ಹಾಸನದಲ್ಲಿ 67ರ ಇಳಿ ವಯಸ್ಸಿನ ವೃದ್ಧೆಯೊಬ್ಬರು ಪ್ಯಾರಾಗ್ಲೈಡಿಂಗ್ ಮಾಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

ವರ್ಷಕ್ಕೊಮ್ಮೆ ದರ್ಶನ ಕರುಣಿಸುವ ಹಾಸನಾಂಬೆ ದರ್ಶನಕ್ಕೆ ಜನಸಾಗರವೇ ಹರಿದುಬರುತ್ತಿದೆ.  ತಾಯಿ ದರ್ಶನಕ್ಕೆ ಬಂದಿದ್ದ ವೃದ್ಧೆ ಸಾಹಸ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ.

ಹಾಸನಾಂಬ ಉತ್ಸವ ಹಿನ್ನೆಲೆ ಬೂವನಹಳ್ಳಿ ಏರ್ ಪೋರ್ಟ್ ನಲ್ಲಿ ನಡೆಯುತ್ತಿರುವ ಪ್ಯಾರಾಗ್ಲೈಡಿಂಗ್, ಪ್ಯಾರಾಸೈಲಿಂಗ್​ನಲ್ಲಿ ಭಾಗಿಯಾಗಿ ನಿಬ್ಬೆರಗು ಮೂಡಿಸಿದ್ದಾರೆ. ಪ್ಯಾರಾಗ್ಲೈಡಿಂಗ್, ಪ್ಯಾರಾಸೈಲಿಂಗ್​ನಲ್ಲಿ ಅನೇಕ ಯುವಕ, ಯುವತಿಯರು ಭಾಗವಹಿಸುತ್ತಿದ್ದು 67ವರ್ಷದ ಅಜ್ಜಿ ಸೀರೆಯುಟ್ಟು ಪ್ಯಾರಾಗ್ಲೈಡಿಂಗ್ ಮಾಡಿ ನೋಡುಗರ ಗಮನ ಸೆಳೆದಿದ್ದಾರೆ. ಬೆಂಗಳೂರು ಮೂಲದ ಅಜ್ಜಿಯ ಎನ್ನಲಾಗಿದೆ.

67 ವರ್ಷದ ವೃದ್ಧೆ ರೋಪ್ ಸೈಕ್ಲಿಂಗ್ ಮಾಡುವುದು, 80 ವರ್ಷ ವಯಸ್ಸಿನ ಅಜ್ಜಿ ಪ್ಯಾರಾಗ್ಲೈಡಿಂಗ್‌ ಮಾಡುವಂತಹ ಅನೇಕ ಸಾಹಸ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಇಳಿ ವಯಸ್ಸಿನಲ್ಲೂ  ಅವರ ಫಿಟ್​ನೆಸ್ ನೋಡಿ ಅಚ್ಚರಿಯಾಗುತ್ತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net