ಮದುವೆಯಾದ 6 ತಿಂಗಳಲ್ಲೇ ಪತಿಗೆ ವಿಚ್ಛೇದನ ನೀಡಿದ ಪತ್ನಿ…4 ಲಕ್ಷ ಖರ್ಚು ಮಾಡಿ ಡಿವೋರ್ಸ್ ಪಾರ್ಟಿ ಮಾಡಿದಳು!

divorce party
Published on

ಬ್ರೆಜಿಲ್‌: ಇತ್ತೀಚಿನ ದಿನಗಳಲ್ಲಿ ವಿಚ್ಛೇದನವು ಸಾಮಾನ್ಯ ಸಂಗತಿಯಾಗಿದೆ. ವಿವಾಹಿತ ದಂಪತಿ ಯಾವುದೋ ಕಾರಣಕ್ಕೆ ಬೇರ್ಪಡುವ ಮತ್ತು ವಿಚ್ಛೇದನ ಪಡೆಯುವ ಬಗ್ಗೆ ನಾವು ಇತ್ತೀಚೆಗೆ ಹೆಚ್ಚು ಕೇಳುತ್ತಿದ್ದೇವೆ. ಪತಿ-ಪತ್ನಿಯರ ನಡುವೆ ಪ್ರೀತಿ, ನಂಬಿಕೆ, ವಿಶ್ವಾಸ ಇರಬೇಕು. ಇಲ್ಲವಾದರೆ ಸಂಬಂಧ ಹೆಚ್ಚು ಕಾಲ ಉಳಿಯುವುದಿಲ್ಲ. ಸಂಬಂಧವನ್ನು ಮುರಿದುಕೊಂಡಾಗ ಅದು ಖಂಡಿತವಾಗಿಯೂ ನೋವುಂಟು ಮಾಡುತ್ತದೆ. ಆದರೆ ಇತ್ತಿನದಿನಗಳಲ್ಲಿ ವಿಚ್ಛೇದನದ ನಂತರ ಸಂತೋಷವಾಗಿರುವ ಕೆಲವು ಜನರಿದ್ದಾರೆ. ಬ್ರೆಜಿಲ್‌ನಲ್ಲೂ ಮಹಿಳೆಯೊಬ್ಬಳು ವಿಚ್ಛೇದನದ ನಂತರ ಲಕ್ಷಗಟ್ಟಲೆ ಹಣವನ್ನು ಖರ್ಚು ಮಾಡಿ ಪಾರ್ಟಿ ಮಾಡಿದ್ದಾಳೆ.

ಈ ಮಹಿಳೆಯ ಹೆಸರು ಲಾರಿಸ್ಸಾ ಸಂಪನಿ. ಈಕೆ ವೃತ್ತಿಯಲ್ಲಿ ಮಾಡೆಲ್. ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯವಾಗಿರುವ ಲಾರಿಸ್ಸಾ ಇತ್ತೀಚೆಗೆ ಇನ್​ಸ್ಟಾಗ್ರಾಮ್​​ನಲ್ಲಿ ತಮ್ಮ ಕೆಲವು ಫೋಟೋಗಳನ್ನು ಹಂಚಿಕೊಂಡು ವಿಚ್ಛೇದನ ಪಡೆದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಲಾರಿಸ್ಸಾ ಮದುವೆಯಾಗಿ ಕೇವಲ 6 ತಿಂಗಳಾಗಿದೆ. ಈಗ ಪತಿಗೆ ವಿಚ್ಛೇದನ ನೀಡಿದ್ದಾಳೆ. ಅವರು ಕಳೆದ ಮೂರು ವರ್ಷಗಳಿಂದ ಒಟ್ಟಿಗೆ ಇದ್ದಾರೆ. ಅಚ್ಚರಿಯ ವಿಷಯವೆಂದರೆ ಲಾರಿಸ್ಸಾ ತನ್ನ ವಿಚ್ಛೇದನದಿಂದ ತುಂಬಾ ಸಂತೋಷವಾಗಿದ್ದಾಳೆ. ವಿಚ್ಛೇದನ ಪಾರ್ಟಿ ಮಾಡಿ ತನ್ನ ಸ್ನೇಹಿತರನ್ನು ಆಹ್ವಾನಿಸಿದಳು. ಈ ವಿಚ್ಛೇದನದ ಪಾರ್ಟಿಯಲ್ಲಿ ಎಲ್ಲರೂ ಒಟ್ಟಿಗೆ ಮೋಜು ಮಾಡಿದರು. ಬರ್ತ್ ಡೇ ಪಾರ್ಟಿಯಲ್ಲಿ ಕೇಕ್ ಕಟ್ ಮಾಡಿದಂತೆಯೇ ಲಾರಿಸ್ಸಾ ತನ್ನ ಡೈವೋರ್ಸ್ ಕೇಕ್ ಕೂಡ ಕಟ್ ಮಾಡಿ ಅದರ ಮೇಲೆ ' ಡೈವೋರ್ಸ್' ಎಂದು ಬರೆದಿದ್ದಾಳೆ. ಲಾರಿಸಾ ಈ ಪಾರ್ಟಿಗಾಗಿ ಸುಮಾರು ರೂ.4 ಲಕ್ಷಗಳನ್ನು ಖರ್ಚು ಮಾಡಿದ್ದಾಳೆ ಎನ್ನಲಾಗಿದೆ.

ವರದಿಗಳ ಪ್ರಕಾರ, 24 ವರ್ಷದ ಲಾರಿಸ್ಸಾ ತನ್ನ ವಿಚ್ಛೇದನದ ಕಾರಣವನ್ನು ಬಹಿರಂಗಪಡಿಸಿದಳು. ತನಗೆ ಹುಡುಗರ ಜತೆಗೆ ಹುಡುಗಿಯರೂ ಇಷ್ಟ. ಆದರೆ ತನ್ನನ್ನು ಬಿಟ್ಟು ಬೇರೆ ಯಾರೊಂದಿಗೂ ಸಂಬಂಧ ಹೊಂದಲು ಗಂಡ ಒಪ್ಪುವುದಿಲ್ಲ. ಈ ಕಾರಣಕ್ಕಾಗಿ ಲಾರಿಸಾ ತನ್ನ ಪತಿಗೆ ವಿಚ್ಛೇದನ ನೀಡಿದ್ದಾಳೆ. ಈಗ ಅವಳು ಸ್ವತಂತ್ರವಾಗಿ ಬದುಕುತ್ತಿದ್ದಾಳೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net