ಮೋದಿಗೆ 66% ಜನಬೆಂಬಲ: ಸಿವೋಟರ್ಸ್​ ಸಮೀಕ್ಷೆ

Namo
Published on

ನವದೆಹಲಿ: ಕೋವಿಡ್-19 ವಿರುದ್ಧ ಹೋರಾಟ ಮತ್ತು ಪರಿಸ್ಥಿತಿ ನಿಭಾಯಿಸಿದ್ದಕ್ಕೆ ಜಾಗತಿಕ ಮನ್ನಣೆ ಪಡೆದಿರುವ ಪ್ರಧಾನಿ ನರೇಂದ್ರ ಮೋದಿಯನ್ನು ಶೇ. 66.20 ಭಾರತೀಯರು ಬೆಂಬಲಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಶೇ. 23.21 ಬೆಂಬಲ ವ್ಯಕ್ತವಾಗಿದೆ.

ಪ್ರಧಾನಿಗೆ ಅತಿ ಹೆಚ್ಚು ಮೆಚ್ಚುಗೆ ವ್ಯಕ್ತವಾಗಿರುವುದು ಒಡಿಶಾದಲ್ಲಿ (ಶೇ. 95.60). ಈ ವಿಷಯದಲ್ಲಿ ಕರ್ನಾಟಕ (ಶೇ.82.56) ಆರನೇ ಸ್ಥಾನದಲ್ಲಿ ಇದೆ. ಗೋವಾ (ಶೇ.52.40), ಕೇರಳ (ಶೇ.46.87) ಮತ್ತು ತಮಿಳುನಾಡುಗಳಲ್ಲಿ (ಶೇ.42.76) ರಾಹುಲ್ ಗಾಂಧಿ ಜನಪ್ರತಿಯತೆ ಹೆಚ್ಚಿದೆ. ಈ ರಾಜ್ಯಗಳಲ್ಲಿ ಕ್ರಮವಾಗಿ ಶೇ. 41.30, ಶೇ. 36.40 ಮತ್ತು ಶೇ. 37.64 ಜನರು ಮೋದಿಯನ್ನು ಬೆಂಬಲಿಸಿದ್ದಾರೆ.

ಕೇಂದ್ರದ ಎನ್​ಡಿಎ ಸರ್ಕಾರಕ್ಕೆ ಹಿಮಾಚಲ ಪ್ರದೇಶ (ಶೇ.97.46), ಒಡಿಶಾ (ಶೇ.95.73) ಮತ್ತು ಛತ್ತೀಸ್​ಗಢದಲ್ಲಿ (ಶೇ.91.42) ಶೇ. 90ಕ್ಕಿಂತ ಅಧಿಕ ಅಂಕ ದೊರೆತಿದ್ದು, ಕರ್ನಾಟಕದಲ್ಲಿ ಶೇ. 67.94 ಜನರ ಬೆಂಬಲ ವ್ಯಕ್ತವಾಗಿದೆ. ದೇಶದಲ್ಲಿ ಒಟ್ಟಾರೆ ಶೇ. 62 ಜನರು ಸರ್ಕಾರವನ್ನು ಬೆಂಬಲಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ಕಡಿಮೆ ಅಂಕ ನೀಡಿದ ರಾಜ್ಯಗಳಲ್ಲಿ ಮೊದಲ ಎರಡು ಸ್ಥಾನ ಬಿಜೆಪಿಯೇ ಆಡಳಿತದ ನೇತೃತ್ವವಹಿಸಿರುವ ಗೋವಾ (ಶೇ.9.62) ಮತ್ತು ಹರಿಯಾಣ (ಶೇ.28.73)ಗಳಾಗಿವೆ. ಸಿವೋಟರ್ಸ್ ಸಂಸ್ಥೆಯು ‘ಸ್ಟೇಟ್ ಆಫ್ ದಿ ನೇಷನ್ 2020’ ಶೀರ್ಷಿಕೆಯಡಿ ಈ ಸಮೀಕ್ಷೆ ನಡೆಸಿದ್ದು, ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ತಲಾ ಮೂರು ಸಾವಿರ ಜನರು ಸರ್ವೆಗೆ ಪ್ರತಿಕ್ರಿಯಿಸಿದ್ದಾರೆ.

ಪಟ್ನಾಯಕ್ ನಂ. 1 ಸಿಎಂ

ಜನಪ್ರಿಯ ಮುಖ್ಯಮಂತ್ರಿಯ ಗರಿ ಒಡಿಶಾದ ಸಿಎಂ ನವೀನ್ ಪಟ್ನಾಯಕ್ (ಶೇ. 82.96) ಮುಡಿ ಗೇರಿದೆ. ಕರ್ನಾಟಕ ಸಿಎಂ ಬಿ.ಎಸ್. ಯಡಿಯೂರಪ್ಪ (ಶೇ.67.21) ಎಂಟನೇ ಸ್ಥಾನದಲ್ಲಿದ್ದಾರೆ. ಹರಿಯಾಣದ ಸಿಎಂ ಮನೋಹರ್ ಲಾಲ್ ಖಟ್ಟರ್ (ಶೇ. 4.47), ಉತ್ತರಾಖಂಡದ ಸಿಎಂ ತ್ರಿವೇಂದ್ರ ಸಿಂಗ್ ರಾವತ್ (ಶೇ.17.72) ಜನಪ್ರಿಯತೆ ಪಟ್ಟಿಯ ಕಡೆಯ ಎರಡು ಸ್ಥಾನದಲ್ಲಿ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net