ರಾಜ್ಯದಲ್ಲಿ 6599 ಗ್ರಾಮ ಗ್ರಂಥಾಲಯ ಸ್ಥಾಪನೆ| Grama Granthalaya

VidhanaSoudha
Published on

ಬೆಂಗಳೂರು: ಗ್ರಾಮೀಣ ಜನರಲ್ಲಿ ಜ್ಞಾನ ವೃದ್ಧಿಸುವ, ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ನೆರವಿನಡಿ ರಾಜ್ಯದಲ್ಲಿ 6599 ಗ್ರಾಮ ಗ್ರಂಥಾಲಯ ತಲೆ ಎತ್ತಲಿವೆ(6599 village libraries established in the state).

ಈಗಾಗಲೇ ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿಗೆ ಒಂದರಂತೆ ಗ್ರಂಥಾಲಯ ಸ್ಥಾಪಿಸಿದೆ. ಅವುಗಳ ಜತೆಗೆ ಕೇಂದ್ರ ಸರ್ಕಾರದ ಸ್ಕೀಮ್ ಫಾರ್  ಸ್ಪೆಷಲ್ ಅಸಿಸ್ಟೆನ್ಸ್ ಟು ಸ್ಟೇಟ್ಸ್  ಫಾರ್ ಕ್ಯಾಪಿಟಲ್ ಇನವೆಸ್ಟ್‌ಮೆಂಟ್ ಯೋಜನೆಯ ಚಿರ್ಲ್ಡನ್ ಅಂಡ್ ಅಡೋಲಿಸೆಂನಟ್ಸ್ ಲೈಬ್ರರೀಸ್ ಅಂಡ್ ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಕಾರ್ಯಕ್ರಮದ ಅಡಿ ಈ ಗ್ರಂಥಾಲಯಗಳು ಸ್ಥಾಪನೆಗೊಳ್ಳಲಿವೆ.

ಮಕ್ಕಳು ಮತ್ತು ಹದಿಹರೆಯದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಗ್ರಂಥಾಲಯಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಡಿಜಿಟಲೀಕರಣ ಹಾಗೂ ಮೂಲಸೌಲಭ್ಯಕ್ಕೆ ಕೇಂದ್ರ ಸರ್ಕಾರ ನೆರವು ನೀಡಲಿದ್ದು, ಈಗಾಗಲೇ ಅನೇಕ ಜಿಲ್ಲೆಗಳಲ್ಲಿ ಕಟ್ಟಡ ಗುರುತಿಸುವ ಕಾರ್ಯ ನಡೆದಿದೆ.

ಎರಡು ದಿನ 4 ಗಂಟೆ ಕಾರ್ಯನಿರ್ವಹಣೆ

ವಸತಿ ಪ್ರದೇಶಗಳ ಹತ್ತಿರದಲ್ಲಿ ಕಟ್ಟಡ ಗುರುತಿಸಲು ಸೂಚಿಸಲಾಗಿದೆ. ಹೊಸದಾಗಿ ಪ್ರಾರಂಭಿಸಲಾಗುವ ಗ್ರಂಥಾಲಯವು ಪ್ರತಿ ಶನಿವಾರ ಹಾಗೂ ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಕನಿಷ್ಟ 4 ಗಂಟೆ ಅವಧಿಗೆ ಕಾರ್ಯನಿರ್ವಹಿಸಬೇಕು.

ಈ ಗ್ರಂಥಾಲಯಗಳನ್ನು ಜಿಪಿಎಲ್‌ಎ್ ಅಡಿಯ ಸ್ವ ಸಹಾಯ ಸಂಘ ನಿರ್ವಹಿಸಬೇಕು. ಯಾವುದೇ ಹೊಸ ಸಿಬ್ಬಂದಿ ನೇಮಕಕ್ಕೆ ಅವಕಾಶವಿಲ್ಲ. ಉಸ್ತುವಾರಿ ನೋಡಿಕೊಳ್ಳುವ ಈ ಸ್ವ ಸಹಾಯ ಸಂಘಕ್ಕೆ ದಿನವೊಂದಕ್ಕೆ 350 ರೂ.ಗಳಂತೆ ಗ್ರಾಮ ಪಂಚಾಯಿತಿಯ ಸ್ವಂತ ಸಂಪನ್ಮೂಲದಿಂದ ಪಾವತಿಸಲು ಸೂಚಿಸಲಾಗಿದೆ.

ಮುಖ್ಯ ಶಿಕ್ಷಕರಿಗೆ ಕೀಲಿಕೈ

ಶಾಲಾ ಕಟ್ಟಡದಲ್ಲಿ ಗ್ರಂಥಾಲಯಕ್ಕೆ ಕಟ್ಟಡ ಗುರುತಿಸಿದ್ದರೆ ಎಸ್‌ಡಿಎಂಸಿ ಮೂಲಕ ಒಪ್ಪಿಗೆ ಪತ್ರವನ್ನು ಗ್ರಾಮ ಪಂಚಾಯಿತಿ ಪಡೆಯಬೇಕು. ಅಲ್ಲದೆ ಗ್ರಂಥಾಲಯ ಶಾಲಾ ಕೊಠಡಿಯಲ್ಲಿ ಪ್ರಾರಂಭಿಸಿದರೆ ಶನಿವಾರ ಮತ್ತು ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಶಾಲಾ ಮಕ್ಕಳು ಗ್ರಂಥಾಲಯ ಬಳಸಲು ಅನುಕೂಲವಾಗುವಂತೆ ಗ್ರಂಥಾಲಯದ ಕೀಲಿಕೈಯನ್ನು ಶಾಲೆ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಬೇಕು.

ಕಟ್ಟಡಕ್ಕೆ ಮೂಲಸೌಕರ್ಯ

ಸಮುದಾಯ ಭವನ ಅಥವಾ ಇತರೆ ಯಾವುದೇ ಸರ್ಕಾರಿ/ಸಾರ್ವಜನಿಕ ಕಟ್ಟಡ ಗುರುತಿಸಿದ್ದಲ್ಲಿ ಮತ್ತು ಗ್ರಾಮ ಪಂಚಾಯಿತಿಯು ಸದರಿ ಕಟ್ಟಡದ ಮಾಲೀಕತ್ವ ಹೊಂದಿಲ್ಲದೇ ಇದ್ದಲ್ಲಿ ಅಂತಹ ಕಟ್ಟಡದ ಮಾಲೀಕತ್ವ ಹೊಂದಿರುವ ವ್ಯಕ್ತಿ/ಸಂಸ್ಥೆಯಿಂದ ಗ್ರಂಥಾಲಯ ಪ್ರಾರಂಭಿಸಲು ಲಿಖಿತ ಅನುಮತಿಪಡೆಯಬೇಕು. ಕಟ್ಟಡಕ್ಕೆ ಅಗತ್ಯವಿರುವ ದುರಸ್ತಿ, ನವೀಕರಣ, ವಿದ್ಯುತ್ ಸಂಪರ್ಕ, ಕುಡಿಯುವ ನೀರು, ್ಯಾನ್ ವೆಚ್ಚಗಳನ್ನು ಗ್ರಾಮ ಪಂಚಾಯಿತಿ ಸ್ವಂತ ಸಂಪನ್ಮೂಲದಿಂದ ಭರಿಸುವಂತೆ ನಿರ್ದೇಶನ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net