61 ಸಾವಿರ ರೂ. ಮೌಲ್ಯದ ರೇಷ್ಮೆ ಸೀರೆ ಕಳವು

Crime Logo
Published on

ನಗರದ ಮಾನಂದವಾಡಿ ರಸ್ತೆಯ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಕಚೇರಿಯ ಆವರಣದಲ್ಲಿನ ಸೀರೆ ಮಾರಾಟ ಮಳಿಗೆಗೆ ಖರೀದಿ ನೆಪದಲ್ಲಿ ಬಂದ ಇಬ್ಬರು ಮಹಿಳೆಯರು, 61 ಸಾವಿರ ರೂ. ಮೌಲ್ಯದ ರೇಷ್ಮೆ ಸೀರೆಯನ್ನು ಕಳವು ಮಾಡಿದ್ದಾರೆ.

ಮಾ.15 ರಂದು ಇಬ್ಬರು ಮಹಿಳೆಯರು ಸೀರೆ ಖರೀದಿಸುವ ನೆಪದಲ್ಲಿ ಬಂದಿದ್ದು, ಸಿಬ್ಬಂದಿ ಕಣ್ತಪ್ಪಿಸಿ 65 ಸಾವಿರ ರೂ. ಮೌಲ್ಯದ ರೇಷ್ಮೆ ಸೀರೆಯನ್ನು ಕದ್ದೊಯ್ದಿದ್ದಾರೆ ಎಂದು ಮಳಿಗೆಯ ಸಿಬ್ಬಂದಿ ದೂರು ನೀಡಿದ್ದು, ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net