

ಬ್ರೇನ್ ಟ್ಯೂಮರ್ನಿಂದ ಬಳಲುತ್ತಿದ್ದ ಇಟಲಿಯ 60 ವರ್ಷದ ವೃದ್ಧೆ ಅಂಕೋನಾ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಸರ್ಜರಿ ಮಾಡಿ, ಮಿದುಳಿನ ಗಡ್ಡೆಯನ್ನು ಹೊರತೆಗೆಯಬೇಕಿತ್ತು.
ಅಂತೆಯೇ ವೈದ್ಯರು ವೃದ್ಧೆಗೆ ಶಸ್ತ್ರಚಿಕಿತ್ಸೆಯನ್ನೂ ಪ್ರಾರಂಭಿಸಿದರು. ಆದರೆ ಮಹಿಳೆ ಸುಮ್ಮನೆ ಇರದೆ, ತಮಗೆ ಸರ್ಜರಿ ನಡೆಯುತ್ತಿದ್ದರೂ, ಆಸ್ಪತ್ರೆ ಬೆಡ್ ಮೇಲೆ ಕುಳಿತು ಸ್ಟಫ್ಡ್ ಆಲಿವ್ ತಿನಿಸನ್ನು ತಯಾರಿಸಿದ್ದಾರೆ. ಇದನ್ನೂ ಓದಿ: ‘ನಿಮ್ಮ ಮುತ್ತಾತನ ಕಾಲದಲ್ಲೇನಾಯಿತು?’ -ರಾಹುಲ್ಗಾಂಧಿ ವಿರುದ್ಧ ತಿರುಗಿ ಬಿದ್ದ ಸಶಸ್ತ್ರಪಡೆ ಹಿರಿಯ ಅಧಿಕಾರಿಗಳು
ಇಟಲಿಯ ಪ್ರಸಿದ್ಧ ತಿನಿಸುಗಳಲ್ಲಿ ಒಂದಾದ ಅಸ್ಕೋಲಿ ಆಲಿವ್ಸ್ಗಳನ್ನು ಇವರು ತಮ್ಮ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದ ವೇಳೆ ತಯಾರಿಸಿ, ಅಚ್ಚರಿ ಮೂಡಿಸಿದ್ದಾರೆ. ಸುಮಾರು ಒಂದು ತಾಸಿನ ಆಪರೇಶನ್ ನಡೆಸಲಾಗಿತ್ತು. ಈ ಒಂದು ಘಂಟೆಯಲ್ಲಿ ವೃದ್ಧ ಮಹಿಳೆ ಬರೋಬ್ಬರಿ 90 ಅಸ್ಕೋಲಿ ಆಲಿವ್ಸ್ಗಳನ್ನು ಬೆಡ್ ಮೇಲೆ ಕುಳಿತೇ ಸಿದ್ಧಪಡಿಸಿದ್ದಾರೆ ಎಂದು ಅಂಕೋನಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: 21 ಬಾಲಕಿಯರನ್ನು ದತ್ತು ಪಡೆದ ಮಾಜಿ ಹಾಕಿ ಆಟಗಾರ
ತಲೆಯ ಶಸ್ತ್ರಚಿಕಿತ್ಸೆ ಆಗಿದ್ದರಿಂದ ಆ ಭಾಗಕ್ಕೆ ಮಾತ್ರ ಅನಸ್ತೇಶಿಯಾ ಕೊಡಲಾಗಿತ್ತು. ಹಾಗಾಗಿ ಸಮಯ ಕಳೆಯುವುದಕ್ಕೋಸ್ಕರ ಮಹಿಳೆ ಒಂದು ಅಸಹಜ, ವಿಶಿಷ್ಟ ಮಾರ್ಗವನ್ನು ಕಂಡುಕೊಂಡರು. ವೈದ್ಯರು ಶಸ್ತ್ರಚಿಕಿತ್ಸೆ ಮಾಡುತ್ತಿದ್ದರೂ ಅವರು ತಿನಿಸಿನ ತಯಾರಿಕೆಯಲ್ಲಿ ತೊಡಗಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಟ್ವಿಟರ್ ಬಳಕೆದಾರರೋರ್ವರು ಟ್ವಿಟರ್ನಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ನರಶಾಸ್ತ್ರಜ್ಞ ರಾಬರ್ಟೊ ಟ್ರಿಗ್ನಾನಿ ಎಂಬುವರು ಮಹಿಳೆಗೆ ಸರ್ಜರಿ ಮಾಡಿದ್ದಾರೆ. ಅವರು ಇಂಥ ಸುಮಾರು 60 ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದು, ಮಿದುಳಿಗೆ ಸಂಬಂಧಪಟ್ಟ ಸರ್ಜರಿಗಳನ್ನು ಮಾಡುವಾಗ, ಅದರ ಕಾರ್ಯ ನಿರ್ವಹಣೆ ಹೇಗಿರುತ್ತದೆ ಎಂಬುದನ್ನು ಗಮನಿಸುವ ಸಲುವಾಗಿ ರೋಗಿಗಳು ಯಾವುದಾದರೂ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಹೇಳುತ್ತೇವೆ. ಕೆಲವರ ಬಳಿ ಹಾಡುತ್ತ ಇರಲು, ಯಾವುದಾದರೂ ಸಂಗೀತ ವಾದ್ಯಗಳನ್ನು ನುಡಿಸಲೂ ಸಲಹೆ ನೀಡುತ್ತೇವೆ. ಈ ಮಹಿಳೆ ಒಂದು ತಾಸಿನಲ್ಲಿ 90 ಸ್ಟಫ್ಡ್ ಆಲಿವ್ಗಳನ್ನು ತಯಾರಿಸಿದ್ದಾರೆ ಎಂದಿದ್ದಾರೆ. (ಏಜೆನ್ಸೀಸ್)