ಆಂಧ್ರಪ್ರದೇಶದ 60 ಪ್ರದೇಶಗಳಲ್ಲಿ NIA ದಾಳಿ; ಎಲ್​​​ಡಬ್ಲ್ಯೂಇ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ

ghh
Published on

ಆಂಧ್ರಪ್ರದೇಶ: ರಾಜಕೀಯ ಬದಲಾವಣೆಗೆ ಪ್ರತಿಪಾದಿಸುವ ರಾಜಕೀಯ ಸಿದ್ಧಾಂತಗಳು ಗುಂಪಾದ ಎಲ್​​​ಡಬ್ಲ್ಯೂಇ ( ಎಡಪಂಥೀಯ ಉಗ್ರಗಾಮಿಗಳ) ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಇಂದು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದ 60 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.


ಆಂಧ್ರಪ್ರದೇಶದ ಪ್ರಕಾಶಂ, ರಾಜಮಂಡ್ರಿ ಮತ್ತು ಶ್ರೀಕಾಕುಳಂ ಜಿಲ್ಲೆಗಳಲ್ಲಿ ಇನ್ನೂ ದಾಳಿಗಳು ನಡೆಯುತ್ತಿದ್ದು, ಎನ್‌ಐಎಯ ಮತ್ತೊಂದು ತಂಡ ಹೈದರಾಬಾದ್‌ನಲ್ಲಿ ಶೋಧ ನಡೆಸುತ್ತಿದೆ.


ಜಾತಿ ನಿರ್ಮೂಲನೆ ಹೋರಾಟದ ನಾಯಕರಾದ ದುಡ್ಡು ವೆಂಕಟರಾವ್, ಓರು ಶ್ರೀನಿವಾಸ ರಾವ್, ನಾಗರಿಕ ಹಕ್ಕುಗಳ ಮುಖಂಡರಾದ ನಾಸರ್ ಮತ್ತು ಇತರ ಹಲವಾರು ಮುಖಂಡರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.


ಅಲ್ಲದೆ, ಹಾರ್ಲಿಕ್ಸ್ ಕಾರ್ಖಾನೆಯ ಉದ್ಯೋಗಿ ಕೋನಾಳ ಲಾಜರ್ ಅವರ ನಿವಾಸದಲ್ಲೂ ಎನ್ಐಎ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಅಲ್ಲದೆ, ಖ್ಯಾತ ವಕೀಲ ಹಾಗೂ ಮಾನವ ಹಕ್ಕುಗಳ ಮುಖಂಡ ಕ್ರಾಂತಿ ಚೈತನ್ಯ ಅವರ ಮನೆಯನ್ನು ಶೋಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net