

ಬಾಗಲಕೋಟೆ: ಚುನಾವಣೆ ಹಿನ್ನೆಲೆ ಪೊಲೀಸ್ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಅಗತ್ಯಕ್ಕಿಂತ ಹೆಚ್ಚಿನ ವಸ್ತುಗಳನ್ನು ಸಾಗಿಸುತ್ತಿದ್ದ ಹಾಗೂ ಸರಿಯಾದ ದಾಖಲೆಗಳಿಲ್ಲದ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗುತ್ತಿದೆ. ಇಸ್ತ್ರಿ ಪೆಟ್ಟಿಗೆಗಳನ್ನ ಸಾಗಿಸ್ತಿದ್ದ ಕ್ಯಾಂಟರ್ ವಾಹನದ ಮೇಲೆ ದಾಳಿ ಮಾಡಿ ವಶಕ್ಕೆ ಪಡೆದುಕೊಳ್ಳಲಾಗಿದೆ.
ಬಾಗಲಕೋಟೆ ಎಸ್.ಪಿ ಜಯಪ್ರಕಾಶ್ ನೇತೃತ್ವದ ತಂಡ ಬಾಗಲಕೋಟೆ ನಗರದ ಹೊರವಲಯದ ಮಹಾರುದ್ರಪ್ಪನ ಹಳ್ಳದ ಬಳಿ ವಾಹನವೊಂದರ ಮೇಲೆ ದಾಳಿ ನಡೆಸಿದೆ. ಬರೋಬ್ಬರಿ 6798 ಇಸ್ತ್ರಿ ಪೆಟ್ಟಿಗೆಗಳಿರುವ ಕ್ಯಾಂಟರ್ ವಾಹನವನ್ನು ಜಪ್ತಿ ಮಾಡಲಾಗಿದೆ. 60 ಲಕ್ಷ ರೂ. ಬೆಲೆಬಾಳುವ ಇಸ್ತ್ರಿ ಪೆಟ್ಟಿಗೆಗಳನ್ನ ಸೀಜ್ ಮಾಡಲಾಗಿದೆ.
ರಾಜಕೀಯ ನಾಯಕರಿಗೆ ಸೇರಿದ ಇಸ್ತ್ರಿ ಪೆಟ್ಟಿಗೆಗಳು ಇರಬಹುದೆಂಬ ಶಂಕೆ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ವಾಹನದ ಚಾಲಕನ ಬಳಿ ಸರಿಯಾದ ಬಿಲ್ ಇರಲಿಲ್ಲ. ಮತದಾರರಿಗೆ ಆಮಿಶ ಒಡ್ಡಲು ಇಸ್ತ್ರಿ ಪೆಟ್ಟಿಗಳನ್ನ ತರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಅಧಿಕಾರಿಗಳು ಈ ಕುರಿತಾಗಿ ತನಿಖೆ ಆರಂಭಿಸಿದ್ದಾರೆ.