

ಬೆಂಗಳೂರು: ಬಾಂಗ್ಲಾದೇಶದಲ್ಲಿ ಉದ್ಯೋಗ ಕೋಟಾದ ಮೇಲೆ ಅಶಾಂತಿ ನಿರ್ಮಾಣವಾಗಿದೆ. ಇದರಿಂದಾಗಿ ಮಾಜಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿದ್ದಲ್ಲದೆ ಪಾಲಾಯನಗೈದಿದ್ದಾರೆ. ಅಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ಕೋಲಾರದಲ್ಲಿ ಟೊಮ್ಯಾಟೊ ಬೆಲೆಯಿಂದ ರೈತರು ಕಂಗಾಲಾಗಿದ್ದಾರೆ.
ಬಾಂಗ್ಲಾದೇಶ ಮಾತ್ರವಲ್ಲದೆ, ಇಂಡೋನೇಷ್ಯಾ ಮತ್ತು ವಿವಿಧ ಭಾರತೀಯ ಮಾರುಕಟ್ಟೆಗಳಿಗೆ ಇಲ್ಲಿಂದ ರಫ್ತಾಗುತ್ತದೆ. ಆದರೀಗ ಬಾಂಗ್ಲಾದೇಶದ ಬಿಕ್ಕಟ್ಟಿನಿಂದ ಫಸ್ಟ್ ಕ್ವಾಲಿಟಿ ಟೊಮ್ಯಾಟೊ ಬೆಲೆ ಶೇ.60 ರಷ್ಟು ಕುಸಿತ ಕಂಡಿದೆ.
ಕೋಲಾರದಿಂದ ಬಾಂಗ್ಲಾದೇಶಕ್ಕೆ ಪ್ರತಿದಿನ ಟೊಮ್ಯಾಟೊ ರಫ್ತಾಗುತ್ತದೆ. ಪ್ರತಿದಿನ 40 ಟ್ರಕ್ ಲೋಡ್ ಟೊಮೊಟೊ ಹೋಗುತ್ತದೆ. ಪ್ರತಿ ಟ್ರಕ್ 900 ಬಾಕ್ಸ್ ಟೊಮೆಟೊ ಹೊತ್ತೊಯ್ಯುತ್ತದೆ. ಆದರೀಗ ಬಾಂಗ್ಲಾದಲ್ಲಿ ರಾಜಕೀಯ ಉದ್ವಿಗ್ನತೆ ಶುರುವಾಗಿನಿಂದ 20 ಟ್ರಕ್ಗೆ ಇಳಿದಿದೆ. ಕಳೆದ ವಾರದಿಂದ ಎಲ್ಲಾ ಸಾಗಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೋಲಾರದ ರೈತರೊಬ್ಬರು ಹೇಳಿದ್ದಾರೆ.
ಕೋಲಾರದ ಟೊಮ್ಯಾಟೊ ವ್ಯಾಪಾರಿಗಳು ಹೇಳುವಂತೆ ಬಾಂಗ್ಲಾದೇಶದಲ್ಲಿ ಉದ್ಭವವಾದ ಸಮಸ್ಯೆಯಿಂದ ಫಸ್ಟ್ ಕ್ವಾಲಿಟಿ ಟೊಮ್ಯಾಟೊ ಬೆಲೆ ಸುಮಾರು 60 ಪ್ರತಿಶತದಷ್ಟು ಕುಸಿದಿದೆ. 15ರಿಂದ 20 ಕೆಜಿ ತೂಕದ ಟೊಮೆಟೊ ಬಾಕ್ಸ್ 1,100ರಿಂದ 1200 ರೂಪಾಯಿಗೆ ಮಾರಾಟವಾಗುತ್ತದೆ. ಬಾಂಗ್ಲಾದೇಶಕ್ಕೆ ಹೋಗುವ ಸ್ಥಳೀಯ ಮಾರುಕಟ್ಟೆಯಲ್ಲಿ ಪ್ರತಿ ಬಾಕ್ಸ್ 450ರಿಂದ 500 ರೂಪಾಯಿಗೆ ಮಾರಾಟವಾಗುತ್ತದೆ.
.