ಕ್ಷುಲ್ಲಕ ಕಾರಣಕ್ಕೆ 6 ವರ್ಷದ ಬಾಲಕನನ್ನು ಶಾಲೆಯ ಮೇಲ್ಛಾವಣಿಯಿಂದ ಎಸೆದ ಶಿಕ್ಷಕ

homework
ಸಾಂದರ್ಭಿಕ ಚಿತ್ರ
Published on

ಕಲ್ಯಾಣಪುರ: ಹೋಮ್‌ವರ್ಕ್ ಮಾಡಲಿಲ್ಲ ಎಂಬ ಕಾರಣಕ್ಕೆ 6 ವರ್ಷದ ಬಾಲಕನನ್ನು ಶಾಲೆಯ ಮೇಲ್ಛಾವಣಿಯಿಂದ ಎಸೆದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಕಲ್ಯಾಣಪುರದ ಬಜಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಕಲ್ಯಾಣಪುರದ ಪ್ರಾಥಮಿಕ ಶಾಲೆಯ ಶಿಕ್ಷಕರು ಮನೆಗೆಲಸವನ್ನು ಮಾಡುವಂತೆ ವಿದ್ಯಾರ್ಥಿಗಳಿಗೆ ಹೇಳಿದ್ದರು. ಆದರೆ ಆರು ವರ್ಷದ ವಿದ್ಯಾರ್ಥಿಯೊಬ್ಬ ನಿಯೋಜಿಸಲಾದ ಮನೆಗೆಲಸವನ್ನು ಮಾಡುವಲ್ಲಿ ವಿಫಲನಾಗಿದ್ದ. ಇದರಿಂದ ಸಿಟ್ಟಿಗೆದ್ದ ಶಿಕ್ಷಕರು ವಿದ್ಯಾರ್ಥಿಗೆ ಥಳಿಸಿ, ಮೇಲ್ಛಾವಣಿಗೆ ಕರೆದೊಯ್ದು ಕೆಳಗೆ ಎಸೆದಿದ್ದಾರೆ ಎಂದು ಪೊಲೀಸ​ರು ತಿಳಿಸಿದ್ದಾರೆ.

ಘಟನೆಯಿಂದಾಗಿ ವಿದ್ಯಾರ್ಥಿಯು ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾನೆ. ವಿದ್ಯಾರ್ಥಿ ಮೈಮೇಲೆ ಕೋಲಿನಿಂದ ಹೊಡೆದ ಗುರುತುಗಳು ಸ್ಪಷ್ಟವಾಗಿದ್ದು, ಆತನಿಗೆ ಮನಃಬಂದತೆ ಥಳಿಸಲಾಗಿದೆ ಎಂದು ಆತನ ಚಿಕ್ಕಪ್ಪ ಆರೋಪಿಸಿದ್ದಾನೆ. ಪೊಲೀಸರು ಆರೋಪಿ ಶಿಕ್ಷಕನನ್ನ ಬಂಧಿಸಿದ್ದು, ಗೌಪ್ಯತೆಯ ಉದ್ದೇಶದಿಂದ ಯಾರ ಗುರುತನ್ನು ಬಹಿರಂಗಪಡಿಸಿಲ್ಲ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net