More

    ವಿದೇಶಿ ಮಹಿಳೆಯರ ಜತೆಗಿನ ಸಂಬಂಧವೇ ಮಹೇಶ್​ ಬಾಬು ಯಂಗ್​ ಆಗಿ ಕಾಣಲು ಕಾರಣವಂತೆ! ವಿವಾದ ಸೃಷ್ಟಿಸಿದ ಹೇಳಿಕೆ

    ಹೈದರಾಬಾದ್​: ಸ್ವಯೋ ಘೋಷಿತ ಸಿನಿಮಾ ವಿಮರ್ಶಕ ದುಬೈ ಮೂಲದ ಉಮೈರ್​ ಸಂಧು, ಸೆಲಿಬ್ರಿಟಿಗಳ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರಲ್ಲೇ ಹೆಚ್ಚು ಕುಖ್ಯಾತಿ ಪಡೆದಿದ್ದಾನೆ. ಕನ್ನಡದ ನಟ ಸುದೀಪ್​ ಹಾಗೂ ಯಶ್​ ಸೇರಿದಂತೆ ವಿವಿಧ ಇಂಡಸ್ಟ್ರಿಯ ನಟ, ನಟಿಯರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ಆಗಾಗ ನೀಡುತ್ತಿರುತ್ತಾನೆ. ಈ ಮೂಲಕ ಅಭಿಮಾನಿಗಳ ಭಾವನೆಗೆ ಧಕ್ಕೆ ತರುವುದು ಉಮೈರ್​ ಸಂಧು ಖಯಾಲಿ ಆಗಿದೆ. ಇದೀಗ ತೆಲುಗು ಸೂಪರ್​ ಸ್ಟಾರ್​ ಮಹೇಶ್​ ಬಾಬು ವಿರುದ್ಧ ಆತ ಮಾಡಿರುವ ಕಾಮೆಂಟ್​ ಅವರ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದೆ.

    ಮಹೇಶ್​ ಬಾಬು ಅವರ ಪ್ರಕಾರ ವಿದೇಶಿ ಮಹಿಳೆಯರ ಜತೆಗಿನ ಸಂಭೋಗವೇ ಅವರನ್ನು ಯಂಗ್​ ಹಾಗೂ ಸೆಕ್ಸಿಯಾಗಿ ಕಾಣುವಂತೆ ಮಾಡುತ್ತದೆಯಂತೆ ಎಂದು ಉಮೈರ್​ ಸಂಧು ಟ್ವೀಟ್​ ಮಾಡಿದ್ದಾರೆ. ಮಹೇಶ್​ ಬಾಬು ಈ ರೀತಿ ಹೇಳಿದ್ದಾರೆ ಎನ್ನುವ ಆಯಾಮದಲ್ಲಿ ಟ್ವೀಟ್​ ಮಾಡಿದ್ದು, ಟ್ವೀಟ್​ ನೋಡಿದ ಮಹೇಶ್​ ಬಾಬು ಅಭಿಮಾನಿಗಳು ಉಮೈರ್​ ಸಂಧು ಅವರನ್ನು ಅಶ್ಲೀಲ ಪದಗಳಿಂದೇ ನಿಂದಿಸುತ್ತಿದ್ದಾರೆ.

    ಇದನ್ನೂ ಓದಿ: ಹಿಂದೂ ಯುವಕ-ಮುಸ್ಲಿಂ ಯುವತಿ ಊಟಕ್ಕೆ ಹೋಗಿ ಬರುವ ವೇಳೆ ಅಮಾನುಷವಾಗಿ ಹಲ್ಲೆ: ರಕ್ಷಿಸಲು ಬಂದ ದಾರಿಹೋಕರಿಗೆ ಚೂರಿ ಇರಿತ

    ಚಿರಂಜೀವಿ ಅಂಕಲ್​ ಎಂದಿದ್ದರು

    ಈ ಹಿಂದೆ ಉಮೈರ್​ ಸಂಧು ಅವರು ಮೆಗಾಸ್ಟಾರ್ ಚಿರಂಜೀವಿ ಅವರನ್ನು ಗುರಿಯಾಗಿಸಿಕೊಂಡಿದ್ದರು. ಚಿರಂಜೀವಿ ಅವರನ್ನು ಅಂಕಲ್​ ಎಂದು ಸಂಭೋದಿಸಿದ್ದರು. ಚಿರಂಜೀವಿ ಅಂಕಲ್ ಯಂಗ್ ಆಗಿ ಕಾಣುವ ಪ್ರಯತ್ನವನ್ನು ಇಲ್ಲಿಗೆ ನಿಲ್ಲಿಸಿ. ನಿಮಗೆ ಈಗ 70 ವರ್ಷ ವಯಸ್ಸಾಗಿದೆ ಎಂದು ನೆನಪಿಸಿಕೊಳ್ಳಿ’ ಎಂದು ಟ್ವೀಟ್ ಮಾಡಿದ್ದರು. ಇದು ಕೂಡ ಸಿಕ್ಕಾಪಟ್ಟೆ ವೈರಲ್​ ಆಗಿ, ಚಿರಂಜೀವಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.

    ಓರ್ವ ಹೆಣ್ಣುಬಾಕ

    ಪವನ್ ಕಲ್ಯಾಣ್ ಬಗ್ಗೆಯೂ ಉಮೈರ್​ ಸಂಧು ಟ್ವೀಟ್ ಮಾಡಿದ್ದರು. ಪವನ್ ಕಲ್ಯಾಣ್ ಓರ್ವ ಹೆಣ್ಣುಬಾಕ. ಅವರು ಈಗಾಗಲೇ ಎರಡು ಬಾರಿ ವಿಚ್ಛೇದನ ಪಡೆದಿದ್ದಾರೆ. ಹೀಗಿದ್ದರೂ ಈಗಾಗಲೇ ಅನೇಕ ಸ್ಟಾರ್ ಹೀರೋಯಿನ್‌ಗಳೊಂದಿಗೆ ರೊಮ್ಯಾನ್ಸ್ ಮಾಡುತ್ತಿರುವುದು ಕಂಡುಬಂದಿದೆ ಎಂದು ಆರೋಪ ಮಾಡಿದ್ದರು.

    ಇದನ್ನೂ ಓದಿ: ಪ್ರವೀಣ್ ನೆಟ್ಟಾರ್ ಪತ್ನಿ ಉದ್ಯೋಗಕ್ಕೆ ಕೊಕ್; ಅಮಾನವೀಯ ಆದೇಶವನ್ನು ಹಿಂಪಡೆಯಲು ಬಿಜೆಪಿ ಆಗ್ರಹ

    ಇತ್ತೀಚೆಗೆ ಉಮೈರ್ ಸಂಧು, ಅನನ್ಯ ಪಾಂಡೆ ಗುರಿಯಾಗಿಸಿ, ಆಕೆ ಸೆಕ್ಸ್​ ವ್ಯಸನಿಯಾಗಿದ್ದಾರೆ ಎಂದು ಹೇಳಿದ್ದರು. ಲೈಗರ್ ಚಿತ್ರದಲ್ಲಿನ ಕೆಟ್ಟ ನಟನೆಗಾಗಿ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಟೀಕೆಗೆ ಒಳಗಾಗಿರುವ ಈ ಚೆಲುವೆ ತನ್ನ ಗೆಳೆಯ ಆದಿತ್ಯ ರಾಯ್ ಕಪೂರ್ ಜೊತೆ ಹಗಲು ರಾತ್ರಿ ಕಳೆಯುತ್ತಿದ್ದಾರೆ ಎಂದಿದ್ದರು. ಉಮೈರ್​ ಸಂಧು ಹೀಗೆ ಸೆಲೆಬ್ರಿಟಿಗಳ ವಿರುದ್ಧ ಏನಾದರೊಂದು ಹೇಳುತ್ತಲೇ ಇರುತ್ತಾರೆ. (ಏಜೆನ್ಸೀಸ್​)

    ನಿಮ್ಮ ಕಣ್ಣಿಗೊಂದು ಸವಾಲ್​: ಸಾಧ್ಯವಾದ್ರೆ ಈ ಫೋಟೋದಲ್ಲಿರುವುದು ಏನೆಂದು 10 ಸೆಕೆಂಡ್​ನಲ್ಲಿ ಗುರುತಿಸಿ!

    ದೈಹಿಕ​ ಸಂಬಂಧ ಬೆಳೆಸುವಂತೆ ವಿದ್ಯಾರ್ಥಿನಿಗೆ ಬೇಡಿಕೆಯಿಟ್ಟ ಶಿಕ್ಷಕ..!

    ದ್ವೇಷ ರಾಜಕಾರಣದೊಂದಿಗೆ ಕಾಂಗ್ರೆಸ್ ಆಡಳಿತ ಆರಂಭಿಸಿದೆ: ವಿಜಯೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts