

ರಾಣೆಬೆನ್ನೂರ: ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿ ನಿಮಿತ್ತ ಇಲ್ಲಿಯ ರಾಜ್ಯ ರೈತ ಸಂದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ನಗರ ಸೇರಿ ತಾಲೂಕಿನಾದ್ಯಂತ ಮನೆ ಮನೆಗೆ ತೆರಳಿ 6 ಸಾವಿರ ಸಂವಿಧಾನ ಓದು ಪುಸ್ತಕ ಹಂಚುವ ಮೂಲಕ ಗಮನ ಸೆಳೆದರು.
ನಿವೃತ್ತ ನ್ಯಾಯಮೂತಿರ್ ಎಚ್.ಎನ್. ನಾಗಮೋಹನ ದಾಸ ಅವರು ಬರೆದ ಸಂವಿಧಾನ ಓದು ಪುಸ್ತಕಗಳನ್ನು ಹನುಮಂತಪ್ಪ ಕಬ್ಬಾರ ಒಂದು ವಾರಗಳ ಕಾಲ ಗ್ರಾಮೀಣ ಭಾಗದ ಮನೆ ಮನೆಗಳಿಗೆ ಹಂಚಿದ್ದಾರೆ. ಅಲ್ಲದೆ ಸೋಮವಾರ ನಗರದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಸಮಾರಂಭ ಹಾಗೂ ಮೆರವಣಿಗೆಯಲ್ಲಿ ಪುಸ್ತಕಗಳನ್ನು ವಿತರಿಸಿದರು. ಜತೆಗೆ ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಮಜ್ಜಿಗೆ, ಬಾಳೆಹಣ್ಣು ವಿತರಿಸಿದರು.