ಒಬ್ಬನನ್ನು ಉಳಿಸಲು ಹೋಗಿ 6 ಬಾಲಕರು ದಾರುಣ ಸಾವು! ಮುಗಿಲು ಮುಟ್ಟಿತು ಹೆತ್ತವರ ಅಕ್ರಂದನ | Students Death

ವಿಜಯವಾಣಿ (46)
Published on

Students Death: ನೀರಿನಲ್ಲಿ ಮುಳುಗುತ್ತಿದ್ದ ಓರ್ವ ಬಾಲಕನನ್ನು ಉಳಿಸಲು ಹೋದ ಐವರೂ ನೀರುಪಾಲಾದ ಘಟನೆ ತೆಲಂಗಾಣದ ಭೂಪಾಲಪಲ್ಲಿ/ಕಾಳೇಶ್ವರಂನಲ್ಲಿ ಸಂಭವಿಸಿದೆ.

ಮೃತ ಆರು ಬಾಲಕರು ಕೂಡ ಒಂದೇ ಕುಟುಂಬದವರು ಎನ್ನಲಾಗಿದೆ. ಮದುವೆ ಸಮಾರಂಭಕ್ಕೆ ಆಗಮಿಸಿದ್ದ ಅಪ್ರಾಪ್ತ ವಯಸ್ಕರಲ್ಲಿ ಯಾರೊಬ್ಬರಿಗೂ ಈಜಲು ಬರುತ್ತಿರಲಿಲ್ಲ ಎಂಬುದು ಅಚ್ಚರಿ ಸಂಗತಿ. ಇಷ್ಟಾದರೂ ನೀರಿನಲ್ಲಿ ಈಜಾಡುವ ಆಸೆಯಿಂದ ಗೋದಾವರಿಯಲ್ಲಿ ಸ್ನಾನ ಮಾಡಲು ನದಿಗೆ ಇಳಿದಿದ್ದರು. ನೀರಿನ ಹರಿವಿನ ಬಗ್ಗೆ ಅಂದಾಜು ಇಲ್ಲದ ಬಾಲಕರು, ಮೋಜಿನ ಮನಸ್ಥಿತಿಯಲ್ಲಿ ನದಿಗೆ ಹಾರಿದ್ದಾರೆ. ಈ ವೇಳೆ ನೀರಿನ ಮಟ್ಟ ಹೆಚ್ಚಾಗಿ ಓರ್ವ ಕೊಚ್ಚಿ ಹೋಗಿದ್ದಾನೆ.

ಆತನನ್ನು ಉಳಿಸಲು ಒಬ್ಬರ ಬೆನ್ನಲ್ಲೇ ಮತ್ತೊಬ್ಬರು ಹೋದ ಹಿನ್ನೆಲೆ ಆರು ಮಂದಿ ನೀರಿನಲ್ಲಿ ಮುಳುಗಿ ದಾರುಣ ಅಂತ್ಯ ಕಂಡಿದ್ದಾರೆ. ಈ ಘಟನೆ ಶನಿವಾರ (ಜೂ.07) ಸಂಜೆ ಜಯಶಂಕರ್ ಭೂಪಾಲಪಲ್ಲಿ ಜಿಲ್ಲೆಯ ಮಹದೇವಪುರ ಮಂಡಲದ ಅಂಬತ್ಪಲ್ಲಿಯಲ್ಲಿ ವರದಿಯಾಗಿದೆ. ಮಧುಸೂಧನ್ (18), ಪಟ್ಟಿ ಶಿವಮನೋಜ್ (15), ತೊಗರಿ ರಕ್ಷಿತ್ (13), ಸಾಗರ್ (16), ಬೊಲ್ಲೆದ್ಲಾ ರಾಮಚರಣ್ (17), ಪಸುಲ ರಾಹುಲ್ (19) ಮತ್ತು ಪಟ್ಟಿ ಶಿವಮಣಿ ಮೃತಪಟ್ಟ ದುರ್ದೈವಿಗಳು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net