

ರೈಲ್ವೆ ಸ್ಟೇಶನ್ನಲ್ಲಿ ಪ್ರಯಾಣಿಕರು ಮತ್ತು ಪ್ರವಾಸಿಗರನ್ನು ಸೆಳೆಯುವ ಪ್ರಯತ್ನದಲ್ಲಿದ್ದ ಆರು ಮಂದಿ ಲೈಂಗಿಕ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರಾಖಂಡದ ಹರಿದ್ವಾರದಲ್ಲಿ ನಿನ್ನೆ ಘಟನೆ ನಡೆದಿದೆ. ಈ ಆರು ಮಹಿಳೆಯರು ಹಣಕ್ಕಾಗಿ ಸ್ಥಳೀಯ ಯುವಕರು, ಪ್ರವಾಸಿಗರು, ರೈಲ್ವೆ ಸ್ಟೇಶನ್ಗೆ ಬರುವ ಪ್ರಯಾಣಿಕರಿಗೆ ಪ್ರಲೋಭನೆ ಒಡ್ಡಿ, ಅವರನ್ನು ಸೆಳೆಯುತ್ತಿರುವ ಬಗ್ಗೆ ಸ್ಥಳೀಯರೇ ಅನೇಕರು ದೂರು ನೀಡಿದ್ದರು. ಈ ದೂರಿನ ಅನ್ವಯ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹಾಗೇ ಈ ಆರು ಮಂದಿ ರೆಡ್ ಹ್ಯಾಂಡೆಡ್ ಆಗಿಯೇ ಸಿಕ್ಕಿಬಿದ್ದಿದ್ದಾರೆ.
ಆರೂ ಮಹಿಳೆಯರೂ ಹರಿದ್ವಾರದ ನಿವಾಸಿಗಳು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಅವರಿಗೆ ಕೌನ್ಸೆಲಿಂಗ್ ಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. (ಏಜೆನ್ಸೀಸ್)