

Brain Tumor | ಒಂದೇ ಆಸ್ಪತ್ರೆಯಲ್ಲಿ ಒಟ್ಟಿಗೆ ಕೆಲಸಮಾಡುವ 6 ನರ್ಸ್ಗಳಿಗೆ ಬ್ರೈನ್ ಟ್ಯೂಮರ್ ಕಾಣಿಸಿಕೊಂಡಿರುವ ಘಟನೆ ಮ್ಯಾಸಚೂಸೆಟ್ಸ್ನಲ್ಲಿ ನಡೆದಿದೆ. ಒಬ್ಬರ ನಂತರ ಒಬ್ಬರಲ್ಲಿ ಈ ಬ್ರೈನ್ ಟ್ಯೂಮರ್ ಕಾಣಿಸಿಕೊಂಡು ಆತಂಕ ಮೂಡಿಸಿದೆ.
ಈ ಕಾಯಿಲೆ ಪೀಡಿತ ನರ್ಸ್ಗಳು ನ್ಯೂಟನ್-ವೆಲ್ಲೆಸ್ಲಿ ಆಸ್ಪತ್ರೆಯಲ್ಲಿಯ ಐದನೇ ಮಹಡಿಯ ಹೆರಿಗೆ ವಿಭಾಗದಲ್ಲಿ ಕೆಲಸ ಮಾಡುತ್ತಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಆಸ್ಪತ್ರೆ ತನಿಖೆಯನ್ನು ಪ್ರಾರಂಭಿಸಿತು ಮತ್ತು ಪ್ರಕರಣಗಳ ಹಿಂದೆ ಆ ಫ್ಲೋರ್ನಲ್ಲಿ ಯಾವುದೇ ರೀತಿಯ ಅಪಾಯವಿಲ್ಲ ಎಂದು ಆಸ್ಪತ್ರೆ ಹೇಳಿಕೊಂಡಿತ್ತು.
ಆದರೆ ನರ್ಸ್ಗಳ ಮೆದುಳಿನಲ್ಲಿ ಸಣ್ಣ ಪ್ರಮಾಣದ ಗಡ್ಡೆಗಳು ಕಾಣಿಸಿಕೊಂಡಿವೆ. ಹಾಗೂ ಇವರೆಲ್ಲರೂ ಐದನೇ ಮಹಡಿಯಲ್ಲಿ ವಿವಿಧ ಅವಧಿಗಳಿಗೆ ಕೆಲಸ ಮಾಡಿದ ಆರು ನರ್ಸ್ಗಳು ಎಂದು ಒಎಚ್ಎಸ್ ಗುರುತಿಸಿದೆ ಹಾಗೆಯೇ ಇದು ಅವರಿಗೆ ಹಾನಿಕರವಲ್ಲದ ಬ್ರೈನ್ ಟ್ಯೂಮರ್ ಎಂದು ಹೇಳಲಾಗಿದೆ.
ಸುತ್ತಮುತ್ತಲಿನ ಪರಿಸರದಲ್ಲಿರುವ ಕ್ಯಾನ್ಸರ್ ಕಾರಕ ವಿಷಗಳು ಇದಕ್ಕೆ ಕಾರಣವಾಗಬಹುದು. ಹಾಗೂ ಸಾಮೂಹಿಕ ಗಡ್ಡೆಗಳ ಹಿಂದಿನ ಕಾರಣವೇನಿರಬಹುದು ಎಂಬುದನ್ನು ತಿಳಿದುಕೊಳ್ಳಲು ಮ್ಯಾಸಚೂಸೆಟ್ಸ್ ನರ್ಸ್ಗಳ ಸಂಘ ಈ ವಿಷಯವನ್ನು ಪರಿಶೀಲಿಸುತ್ತಿದೆ. ಈ ಬಗ್ಗೆ ಆಸ್ಪತ್ರೆ ಅಧಿಕಾರಿಗಳು ಸಾಮಾನ್ಯ ಕಾರಣವನ್ನು ಕಂಡುಕೊಳ್ಳದಿದ್ದರೂ, ಆಸ್ಪತ್ರೆ ಸಿಬ್ಬಂದಿಗಳು ಬೇರೆಯ ರೀತಿಯಲ್ಲಿಯೇ ಯೋಚಿಸುತ್ತಿದ್ದಾರೆ. ಈ ಬ್ರೈನ್ ಟ್ಯೂಮರ್ ನಡುವಿನ ಸಾಮಾನ್ಯ ಸಂಬಂಧವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ ಎಂದು OHS ಹೇಳುತ್ತಿದೆ. ಈ ಪರಿಸ್ಥಿತಿಗಳು ವೈದ್ಯಕೀಯ ಕೆಲಸದ ವಾತಾವರಣದಿಂದ ಉಂಟಾಗಿವೆ ಎಂಬುದಕ್ಕೆ ನಮಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂಬುದು ವರದಿಯಲ್ಲಿ ತಿಳಿಸಲಾಗಿದೆ.
ಗಡ್ಡೆಗಳ ಮೂಲ ಕಾರಣವನ್ನು ತಲುಪಲು ಈ ವಿಷಯದ ತನಿಖೆಯನ್ನು ಮುಂದುವರಿಸುವುದಾಗಿ ಮ್ಯಾಸಚೂಸೆಟ್ಸ್ ನರ್ಸ್ ಅಸೋಸಿಯೇಷನ್ ಹೆರಾಲ್ಡ್‌ಗೆ ತಿಳಿಸಿದೆ. ಆಸ್ಪತ್ರೆಯ ತನಿಖೆ ಸಮಗ್ರವಾಗಿಲ್ಲ ಮತ್ತು ನ್ಯೂಟನ್-ವೆಲ್ಲೆಸ್ಲಿ ಆಸ್ಪತ್ರೆಯಲ್ಲಿ ಏನೋ ತಪ್ಪಾಗಿದೆ ಎಂದು ತೋರುತ್ತದೆ ಎಂದು ಅದು ಹೇಳಿದೆ. ಈ ತಿಂಗಳ ಅಂತ್ಯದವರೆಗೆ ತನಿಖೆ ಮುಂದುವರಿಯಲಿದ್ದು, ಅಂದು ಒಕ್ಕೂಟವು ತನ್ನ ಸಂಶೋಧನೆಗಳನ್ನು ಬಹಿರಂಗಪಡಿಸುತ್ತದೆ. ತನಿಖೆ ಇನ್ನೂ ನಡೆಯುತ್ತಿದ್ದು, ಸ್ಪಷ್ಟ ಕಾರಣ ಹೊರಬರಬೇಕಿದೆ.
ಬ್ರೈನ್ ಟ್ಯೂಮರ್ ಮೂಲ ಕಾರಣವನ್ನು ತಿಳಿಯಲು ಈ ವಿಷಯದ ತನಿಖೆಯನ್ನು ಮುಂದುವರಿಸುವುದಾಗಿ ಮ್ಯಾಸಚೂಸೆಟ್ಸ್ ನರ್ಸ್ ಅಸೋಸಿಯೇಷನ್ ಹೆರಾಲ್ಡ್‌ಗೆ ತಿಳಿಸಿದ್ದು, ನ್ಯೂಟನ್-ವೆಲ್ಲೆಸ್ಲಿ ಆಸ್ಪತ್ರೆಯಲ್ಲಿ ಏನೋ ತಪ್ಪಾಗಿದೆ ಅಥವಾ ಆಸ್ಪತ್ರೆಯ ತನಿಖೆ ಸಮಗ್ರವಾಗಿಲ್ಲ ತೋರುತ್ತದೆ ಎಂಬುದನ್ನು ಹೇಳಿದೆ. ಈ ತಿಂಗಳ ಕೊತೆಯವರೆಗೂ ತನಿಖೆ ಮುಂದುವರಿಯಲಿದ್ದು, ನಂತರ ಸಂಶೋಧನೆಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುತ್ತದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)