

ಮಹಾರಾಷ್ಟ್ರ: ಖಾಸಗಿ ಕಾಲೇಜಿನ ಫ್ರೆಶರ್ಸ್ ಪಾರ್ಟಿಯಲ್ಲಿ ತನ್ನ ಸಹಪಾಠಿಗಳಿಂದಲೇ ಹಲ್ಲೆಗೊಳಗಾಗಿ ವಿದ್ಯಾರ್ಥಿಯೊಬ್ಬ (College Student) ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಲಾತೂರ್ನಲ್ಲಿ ನಡೆದಿದೆ.
ಲಾತೂರ್ನ ಎಂಐಡಿಸಿ ಪ್ರದೇಶದ ಪ್ರಸಿದ್ಧ ಕಾಲೇಜಿನಲ್ಲಿ ( ಅ.08) ರಂದು ಫ್ರೆಶರ್ಸ್ ಪಾರ್ಟಿಯಲ್ಲಿ ಸಣ್ಣ ವಿವಾದವು ಶೀಘ್ರದಲ್ಲೇ ದೊಡ್ಡ ವಿಚಾರಕ್ಕೆ ತಿರುಗಿದ್ದು, ಕೋಪದ ಭರದಲ್ಲಿ ಗುಂಪೊಂದು ವಿದ್ಯಾರ್ಥಿ ಶಿಂಧೆ ಮೇಲೆ ಕೋಲು ಮತ್ತು ಮುಷ್ಟಿಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಮಾಹಿತಿ ಹೊರಬಂದಿದೆ.
ಈ ವೇಳೆ ಶಿಂಧೆ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹತ್ತಿರ ಇರುವ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಚಿಕಿತ್ಸೆಯ ಸಮಯದಲ್ಲಿ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಮಂಗಳವಾರ (ಅ.21) ಹಲ್ಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಭಾಗಿಯಾಗಿರುವುದು ಬೆಳಕಿಗೆ ಬಂದ ನಂತರ ಅವರನ್ನು ಬಂಧಿಸಲಾಗಿದ್ದು, ಬಂಧಿತರ ಸಂಖ್ಯೆ 6 ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ, ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು, ಅಪಾಯಕಾರಿ ಆಯುಧಗಳು, ಬೆದರಿಕೆ ಮತ್ತು ಶಾಂತಿ ಉಲ್ಲಂಘನೆಯನ್ನು ಪ್ರಚೋದಿಸುವ ಉದ್ದೇಶ ಸೇರಿದಂತೆ ಇನ್ನಿತರ ಪ್ರಕರಣಕ್ಕೆ ಸಂಬಂಧಿಸಿದಂತೆ 6 ವಿದ್ಯಾರ್ಥಿಗಳ ಮೇಲೆ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್)