ದ್ವಿತೀಯ ಏಕದಿನ ಪಂದ್ಯದಲ್ಲೂ ಕೊಹ್ಲಿ ಡಕ್​ಔಟ್​! ಟೀಮ್ ಇಂಡಿಯಾಗೆ ಡಬಲ್ ಶಾಕ್​ | IND vs AUS ODI

ವಿಜಯವಾಣಿ (92)
Published on

IND vs AUS ODI: ಆತಿಥೇಯ ಆಸೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಪಂದ್ಯ ಸೋತಿರುವ ಟೀಮ್ ಇಂಡಿಯಾ, ಇಂದು ಎರಡನೇ ಪಂದ್ಯವನ್ನು ಅಡಿಲೇಡ್​ ಕ್ರೀಡಾಂಗಣದಲ್ಲಿ ಆಡುತ್ತಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ, ಮೊದಲು ಬೌಲಿಂಗ್ ಆಯ್ದುಕೊಂಡಿತು. ಅಂತೆಯೇ ಬ್ಯಾಟಿಂಗ್​​ಗಿಳಿದ ಭಾರತಕ್ಕೆ ಮತ್ತೊಮ್ಮೆ ಆರಂಭಿಕ ಆಘಾತ ಎದುರಾಯಿತು.

ಓಪನಿಂಗ್ ಬಂದ ರೋಹಿತ್ ಶರ್ಮ, ಉತ್ತಮ ಇನ್ನಿಂಗ್ಸ್ ನೀಡಿದರೆ, ದಿಗ್ಗಜ ಬ್ಯಾಟರ್​ ವಿರಾಟ್ ಕೊಹ್ಲಿ, ಸತತ ಎರಡನೇ ಪಂದ್ಯದಲ್ಲಿಯೂ ವಿಫಲರಾಗಿದ್ದಾರೆ. ಮೊದಲ ಪಂದ್ಯದಲ್ಲಿ ಡಕ್​ಔಟ್​ ಆಗಿ ಪೆವಿಲಿಯನ್​ ಹಾದಿ ಹಿಡಿದಂತೆಯೇ ಇಂದಿನ ಮ್ಯಾಚ್​ನಲ್ಲಿಯೂ ಕೊಹ್ಲಿ ಶೂನ್ಯಕ್ಕೆ ಔಟ್ ಆದರು. ನಾಲ್ಕು ಎಸೆತಗಳನ್ನು ಆಡಿದ ಕೊಹ್ಲಿ, ಕ್ಸೇವಿಯರ್ ಬಾರ್ಟ್ಲೆಟ್ ಬೌಲಿಂಗ್‌ನಲ್ಲಿ ಎಲ್ಬಿಡಬ್ಲ್ಯೂ ಆಗಿ ಪೆವಿಲಿಯನ್​ಗೆ ಮರಳಿದರು. ಇದು ಕ್ರಿಕೆಟ್​ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಇದುವರೆಗೆ ಒಂದೇ ಒಂದು ರನ್ ಗಳಿಸದ ಕೊಹ್ಲಿ, ಸತತ ಎರಡು ಪಂದ್ಯದಲ್ಲಿಯೂ ಡಕ್​ ಔಟ್​ ಆಗಿರುವ ಸಂಗತಿ ಸದ್ಯ ಅಭಿಮಾನಿಗಳಿಗೆ ಅರಗಿಸಿಕೊಳ್ಳುವುದು ಅಸಾಧ್ಯವಾಗಿದೆ. ಇನ್ನು ರೋಹಿತ್ ಶರ್ಮ 73 ರನ್​ ಬಾರಿಸುವ (7 ಬೌಂಡರಿ, 2 ಸಿಕ್ಸರ್​) ಮೂಲಕ ಉತ್ತಮ ಪ್ರದರ್ಶನ ನೀಡಿ, ತಮ್ಮ ಮೇಲಿದ್ದ ಒತ್ತಡವನ್ನು ಕೊಂಚ ಇಳಿಸಿಕೊಂಡಿದ್ದಾರೆ. ಇದರೊಟ್ಟಿಗೆ, ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಹೊಸ ದಾಖಲೆಗಳಿಗೆ ಸಾಕ್ಷಿಯಾಗಿದ್ದಾರೆ.

ಪಂದ್ಯದ ವಿವರ*

ಟಾಸ್ ಸೋತು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ಒಂದೇ ಓವರ್‌ನಲ್ಲಿ ಡಬಲ್ ಶಾಕ್ ಅನುಭವಿಸಿತು. ಕ್ಸೇವಿಯರ್ ಬಾರ್ಟ್ಲೆಟ್ ಇನ್ನಿಂಗ್ಸ್‌ನ 7ನೇ ಓವರ್​ನಲ್ಲಿ ಕ್ಯಾಪ್ಟನ್​ ಶುಭಮನ್ ಗಿಲ್ (9) ಮೊದಲ ಎಸೆತದಲ್ಲೇ ಔಟಾದರು. ಇದರೊಂದಿಗೆ ಭಾರತವು 17 ಸ್ಕೋರ್​ಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಇನ್ನು ಅದೇ ಓವರ್​ನ ಐದನೇ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಆಗಿ ವಿರಾಟ್​ ಔಟ್​ ಆಗಿದ್ದು, ಟೀಮ್ ಇಂಡಿಯಾವನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net