ಸರ್ಫರಾಜ್​ ಖಾನ್​ಗೆ ಯಾಕಿಂತ ಅನ್ಯಾಯ!? ಬಿಸಿಸಿಐ ವಿರುದ್ಧ ಗುಡುಗಿದ ಕ್ರಿಕೆಟ್​ ಪ್ರಿಯರು | Sarfaraz Khan

ವಿಜಯವಾಣಿ (91)
Published on

ನವದೆಹಲಿ: ರಿಷಭ್ ಪಂತ್ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಿಂದ ಯುವ ಬ್ಯಾಟರ್​ ಸರ್ಫರಾಜ್ ಖಾನ್​ರನ್ನು ಮತ್ತೊಮ್ಮೆ ಕೈಬಿಡಲಾಗಿದೆ. ಕಳೆದ ಹಲವು ಟೆಸ್ಟ್​ ಸರಣಿಯಿಂದ ಖಾನ್​ಗೆ ಅವಕಾಶ ಕೊಡದ ಬಿಸಿಸಿಐ ನಿರ್ಧಾರವನ್ನು ಟೀಕಿಸಿರುವ ಕ್ರಿಕೆಟ್ ಪ್ರಿಯರು, ಯುವ ಆಟಗಾರನನ್ನು ಏಕಿಷ್ಟು ಟಾರ್ಗೆಟ್​ ಮಾಡುತ್ತಿದ್ದೀರಿ ಎಂದು ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಇದೇ ಅ.30ರಿಂದ ಆರಂಭವಾಗಲಿರುವ ಈ ಪಂದ್ಯವು ಬೆಂಗಳೂರಿನಲ್ಲಿ ನಡೆಯಲಿದೆ. ತಂಡದಲ್ಲಿ ಸಾಯಿ ಸುದರ್ಶನ್​, ಕೆ.ಎಲ್​. ರಾಹುಲ್​, ದೇವದತ್ತ ಪಡಿಕ್ಕಲ್​, ಧ್ರುವ್​ ಜ್ಯುರೆಲ್​, ಮೊಹಮ್ಮದ್​ ಸಿರಾಜ್​ ಸೇರಿದಂತೆ ಮತ್ತಿತರರಿಗೆ ಬಿಸಿಸಿಐ ಸ್ಥಾನ ಕೊಟ್ಟಿದ್ದೇ ಆದರೂ ಸ್ಟಾರ್​ ಬ್ಯಾಟರ್​ ಸರ್ಫರಾಜ್​ರನ್ನು ಕೈಬಿಟ್ಟಿದ್ದು ಏಕೆ? ಯಾವ ಕಾರಣಕ್ಕೆ? ಎಂದೆಲ್ಲ ನೆಟ್ಟಿಗರು ಪ್ರಶ್ನಿಸಿದ್ದಾರೆ. ಒಂದೆರೆಡು ಬಾರಿ ಹೊರಗಿಟ್ಟಿದ್ದರೆ ಓಕೆ. ಆದರೆ, ಪದೇ ಪದೇ ಒಬ್ಬ ಆಟಗಾರನಿಗೆ ಈ ರೀತಿ ಮಾಡುವುದು ಸರಿಯಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.

ಸರ್ಫರಾಜ್​ ಅದ್ಭುತ ಇನ್ನಿಂಗ್ಸ್​

ರೆಡ್​ ಬಾಲ್​ ಕ್ರಿಕೆಟ್​ನಲ್ಲಿ ಅದ್ಭುತ ಇನ್ನಿಂಗ್ಸ್ ನೀಡಿರುವ ಸರ್ಫರಾಜ್ ಖಾನ್​, ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಎ ತಂಡದ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಖಾನ್​, ಬರೋಬ್ಬರಿ 92 ರನ್​ ಬಾರಿಸಿದ್ದರು. ಕೆಲ ಸಮಯ ಫಿಟ್ನೆಸ್​ ವಿಷಯವಾಗಿ ತಂಡದಿಂದ ಹೊರಗುಳಿದ ಸರ್ಫರಾಜ್​, 10 ಕೆಜಿಗಿಂತ ಹೆಚ್ಚು ತೂಕ ಇಳಿಸಿಕೊಂಡು ತಂಡಕ್ಕೆ ಭರ್ಜರಿ ಕಮ್​ಬ್ಯಾಕ್ ಮಾಡಿದರು. ರಣಜಿ ಟ್ರೋಫಿಯಲ್ಲಿ ಮುಂಬೈ ಪರ 74 ರನ್​ ಸಿಡಿಸಿದ್ದಾರೆ. ಇಷ್ಟೆಲ್ಲ ಕೊಟ್ಟಿದ್ದರೂ ಸಹ ಸ್ಟಾರ್​ ಬ್ಯಾಟರ್​ನನ್ನು ಮತ್ತೊಮ್ಮೆ ಅವಕಾಶದಿಂದ ವಂಚಿತಗೊಳಿಸಿರುವುದು ಸದ್ಯ ಕ್ರಿಕೆಟ್ ಪ್ರೇಮಿಗಳ ಅಸಮಾದಾನಕ್ಕೆ ಕಾರಣವಾಗಿದೆ.

ಹೀಗಿದೆ ಕ್ರಿಕೆಟ್​ ಪ್ರೇಮಿಗಳ ಪ್ರತಿಕ್ರಿಯೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net