

ನವದೆಹಲಿ: ದೆಹಲಿಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಥಳಿಸಿ ಕೊಂದ ಸುಂದರ್ ನಾಗ್ರಿ ಪ್ರಕರಣದಲ್ಲಿ ದೆಹಲಿ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ. ಅದರಲ್ಲಿ ಓರ್ವ ಅಪ್ರಾಪ್ತನೂ ಸೇರಿರುವ ಘಟನೆ ವರದಿಯಾಗಿದೆ.
ಸಾವನ್ನಪ್ಪಿದ ವ್ಯಕ್ತಿಯ ತಂದೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ನನ್ನ ಮಗ ಗಣೇಶನ ಹಬ್ಬದಂದು ಪ್ರಸಾದ ಸೇವಿಸಿದ್ದ. ಅದಾದ ಬಳಕ ಅಸ್ವಸ್ತಗೊಂಡು ಸಾವನ್ನಪ್ಪಿದ್ದಾನೆ. ಗುಂಪೊಂದು ಈ ರೀತಿಯಾಗಿ ನನ್ನ ಮಗನನ್ನ ಕೊಂದಿದೆ ಎಂದು ಮೃತ ವ್ಯಕ್ತಿಯ ತಂದೆ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆದಾಗ್ಯೂ, ಈ ವಿಷಯದಲ್ಲಿ ಯಾವುದೇ ಕೋಮು ಸಂಘರ್ಷ ನಡೆದಿಲ್ಲ ಎಂದು ಪೊಲೀಸ್ ಉಪ ಆಯುಕ್ತ ಜಾಯ್ ಟಿರ್ಕಿ ತಿಳಿಸಿದ್ದಾರೆ.
ಬಂಧಿತ ಆರು ಜನರಲ್ಲಿ ಡಿಜೆ ವ್ಯಾಪಾರದ ಮಾಲೀಕ ಕಮಲ್, ಟೈಲರ್ ಅಂಗಡಿಯನ್ನು ನಡೆಸುತ್ತಿರುವ ಮನೋಜ್ ಮತ್ತು ಕಮಲ್ನ ಸಹೋದರ, ಕಮಲ್‌ಗಾಗಿ ಡಿಜೆಯಾಗಿ ಕೆಲಸ ಮಾಡುವ ಯೂನಸ್, ಟೆಂಟ್ ಹೌಸ್ ಕಾರ್ಮಿಕ ಕಿಶನ್, ಥ್ರೆಡ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಪಪ್ಪು ಮತ್ತು ಮೊಮೊ ಸ್ಟಾಲ್ ನಡೆಸುತ್ತಿರುವ ಲಕ್ಕಿ ಘಟನೆಯಲ್ಲಿ ಭಾಗಿಯಾದ್ದಾರೆಂದು ತನಿಖೆ ವೇಳೆ ತಿಳಿದು ಬಂದಿದೆ.
ಪೊಲೀಸರು ಬಂಧಿತ 6 ಮಂದಿಯನ್ನ ಘಟನೆಯ ಕುರಿತಂತೆ ವಿಚಾರಿಸಿದಾಗ ಸಾವನ್ನಪ್ಪಿದ ಇಸಾರ್ ಕಳ್ಳನಂತೆ ನಮ್ಮ ಏರಿಯಾದಲ್ಲಿ ಓಡಾಡುತ್ತಿದ್ದ. ನಾವು ಪ್ರಶ್ನೆಗಳನ್ನ ಕೇಳಲು ಪ್ರಾರಂಭಿಸಿದಾಗ ಯಾವುದಕ್ಕೂ ಉತ್ತರ ಕೊಟ್ಟಿಲ್ಲ. ಅವನು ಮಾನಸಿಕವಾಗಿ ಅಸ್ವಸ್ಥನಾಗಿದ್ದರಿಂದ ಸರಿಯಾಗಿ ಉತ್ತರಿಸಲು ಸಾಧ್ಯವಾಗಿಲ್ಲ ನಂತರ ಆತನನ್ನ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ.
ಇಸಾರ್ ಅವರ ತಂದೆ ತನ್ನ ಮಗನಿಗೆ ಮಾನಸಿಕವಾಗಿ ಯಾವುದೇ ತೊಂದರೆ ಇಲ್ಲ. ಪ್ರಸಾದ" ತಿಂದಿದ್ದಕ್ಕಾಗಿ ಅವನನ್ನು ಥಳಿಸಿ ಕೊಂದಿದ್ದಾರೆ. ಇನ್ನು ಶವಪರೀಕ್ಷೆಯ ಸಮಯದಲ್ಲಿ, ವೈದ್ಯರು ಇಸಾರ್ ಸಾವಿಗೆ ಆಘಾತ ಮತ್ತು ರಕ್ತಸ್ರಾವ ಕಾರಣ ಎಂದು ತಿಳಿಸಿದ್ದಾರೆ.