

ಕಡೂರು: ರಾಜ್ಯದ ಮಹಿಳೆಯರಿಗೆ 500 ಕೋಟಿ ಉಚಿತ ಪ್ರಯಾಣಗಳ ಟಿಕೆಟ್‌ಗಳನ್ನು ಶಕ್ತಿ ಯೋಜನೆಯಡಿಯಲ್ಲಿ ವಿತರಿಸಿ ದಾಖಲೆ ನಿರ್ಮಿಸಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಆಸಂದಿ ಕಲ್ಲೇಶ್ ತಿಳಿಸಿದರು.
ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸೋಮವಾರ ಆಯೋಜಿಸಿದ್ದ ಶಕ್ತಿ ಯೋಜನೆಯ 500 ಕೋಟಿ ಉಚಿತ ಪ್ರಯಾಣಗಳ ಟಿಕೆಟ್ ವಿತರಣೆಯ ಸಂಭ್ರಮಾಚರಣೆಯಲ್ಲಿ ಮಾತನಾಡಿ, ಗ್ಯಾರಂಟಿ ಯೋಜನೆ ರಾಜ್ಯ ಅಧ್ಯಕ್ಷ ಎಚ್.ಎಂ.ರೇವಣ್ಣ ಅವರ ಸೂಚನೆಯಂತೆ ಶಕ್ತಿ ಯೋಜನೆಯು ದೇಶ ಮತ್ತು ವಿಶ್ವದಲ್ಲಿಯೇ ಒಂದು ನೂತನ ದಾಖಲೆ ನಿರ್ಮಿಸಿದೆ. ಕಡೂರು ತಾಲೂಕಿನಲ್ಲಿ ಕಳೆದ 2 ವರ್ಷದಿಂದ 1.30 ಕೋಟಿ ಪ್ರತಿ ತಿಂಗಳು 6.5 ಲಕ್ಷ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ.
ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉಪಯುಕ್ತವಾಗಿದೆ. ಈ ಯೋಜನೆಯನ್ನು ಆಂಧ್ರ, ಮಹಾರಾಷ್ಟ್ರ ಸರ್ಕಾರ ಜಾರಿಗೊಳಿಸಿ ಕಾರ್ಯರೂಪಕ್ಕೆ ತರದೆ ಸೋತು ಹೋಗಿದೆ ಎಂದು ವ್ಯಂಗ್ಯವಾಡಿದರು. ಕೆಡಿಪಿ ಸದಸ್ಯ ಗುಮ್ಮನಹಳ್ಳಿ ಅಶೋಕ್, ದಾಸಯ್ಯನಗುತ್ತಿ ಚಂದ್ರಪ್ಪ , ಕಡೂರು ರಾಜ್ಯ ರಸ್ತೆ ಸಾರಿಗೆ ಡಿಪೋ ವ್ಯವಸ್ಥಾಪಕಿ ಅರುಣ್‌ಕುಮಾರಿ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಸದಸ್ಯರಾದ ಸಪ್ತಕೋಟಿ ಧನಂಜಯ್, ಸುಜಾತ ಚಂದ್ರಶೇಖರ್, ಪುಷ್ಪಾ, ಶೋಭಾ ಕುಪ್ಪಾಳು, ಮನೋಹರ್, ಗಿರೀಶ್‌ನಾಯ್ಕ್, ಸಂತೋಷ್, ರೋಹನ್ ಫರ್ನಾಂಡಿಸ್, ಚನ್ನಪ್ಪ ಮಚ್ಚೇರಿ, ಮಧು ಸಿಂಗಟಗೆರೆ, ರಮೇಶ್ ಮತ್ತಿತರಿದ್ದರು. ಸಾರಿಗೆ ಸಂಸ್ಥೆಯ ಬಸ್ ಚಾಲಕ ಮತ್ತು ನಿರ್ವಾಹಕರನ್ನು ಸನ್ಮಾನಿಸಲಾಯಿತು.