596 ರೌಡಿಶೀಟರ್ ವಶಕ್ಕೆ

SP Dharmendrakumar Meena
Published on

ಚಿತ್ರದುರ್ಗ: ಲೋಕಸಭಾ ಚುನಾವಣೆ ಸಂಬಂಧ ಚೆಕ್‌ಪೋಸ್ಟ್, ಸಂಚಾರಿ ಕಣ್ಗಾವಲು ತಂಡಗಳಿಗೆ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಚುನಾವಣೆ ಅಕ್ರಮ ತಡೆ, ಕಾನೂನು ಸುವ್ಯವಸ್ಥೆ ಕಾಪಾಡಲು ಈಗಾಗಲೇ 596 ಸಮಾಜ ವಿದ್ರೋಹಿಗಳು, ರೌಡಿಶೀಟರ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಪಿ ಧರ್ಮೇಂದರ್‌ಕುಮಾರ್ ಮೀನಾ ತಿಳಿಸಿದ್ದಾರೆ.

ಉಳಿದ ಪ್ರಕರಣಗಳ ಸಂಬಂಧ ತಹಸೀಲ್ದಾರ್ ಶೀಘ್ರ ನಿರ್ಧಾರ ಕೈಗೊಳ್ಳಬೇಕು. 20 ಜನರನ್ನು ಗಡಿಪಾರು ಮಾಡುವ ಸಂಬಂಧದ ಶಿಫಾರಸ್ಸನ್ನು ಎಸಿ ಅವರಿಗೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net