

ಬೆಂಗಳೂರು: ನಗರದಲ್ಲಿ ಪಟಾಕಿಯ ಅಕ್ರಮ ಮಾರಾಟ, ದಾಸ್ತಾನು ಮಾಡಿದ್ದ ವ್ಯಾಪಾರಿಗಳ ವಿರುದ್ಧ ನಗರ ಪೊಲೀಸರು 56 ಪ್ರಕರಣ ದಾಖಲಿಸಿದ್ದಾರೆ.
ನಗರ ಪೊಲೀಸರು ಅ.೩೧ ರಿಂದ ನ.೧ ರವರೆಗೂ ನಗರದ ಎಲ್ಲಾ ಕಡೆ ಶೋಧ ನಡೆಸಿದ್ದು, ಈ ವೇಳೆ ೫೬ ಕ್ಕೂ ಹೆಚ್ಚು ವ್ಯಾಪಾರಿಗಳು ನಿಯಮ ಉಲ್ಲಂಸಿ ಪಟಾಕಿ ವ್ಯಾಪಾರ ಮಾಡಿತ್ತಿರುವುದು ಕಂಡು ಬಂದಿದ್ದು, ಅಂತವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶನಿವಾರ ಮತ್ತು ಭಾನುವಾರವೂ ಈ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ೭೨ ಮೈದಾನಗಳಲ್ಲಿ ತಾತ್ಕಾಲಿಕವಾಗಿ ಪಟಾಕಿ ಮಾರಾಟಕ್ಕೆ ೩೧೫ ಪರವಾನಗಿ ನೀಡಲಾಗಿತ್ತು. ಆದರೆ ಪರವಾನಗಿ ಪಡೆಯದೆ ಕೆಲವರು ರಸ್ತೆಬದಿ ಹಾಗೂ ತಳ್ಳುವಗಾಡಿಯಲ್ಲಿ ಪಟಾಕಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ಅಂತವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
೫೬ ಪ್ರಕರಣ ದಾಖಲು:
ಉತ್ತರ-೯, ದಕ್ಷಿಣ-೪, ಪೂರ್ವ-೬, ಈಶಾನ್ಯ-೧೯, ಆಗ್ನೇಯ-೯, ವೈಟ್‌ಫೀಲ್ಡ್-೯ ಸೇರಿ ಒಟ್ಟು ೫೬ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.