55 ವರ್ಷದ ವ್ಯಕ್ತಿಯನ್ನು ಮದುವೆಯಾದ್ಲು 25ರ ಯುವತಿ...!

Rajastan bride and groom
Published on

ರಾಜಸ್ಥಾನ: 55 ವರ್ಷದ ವ್ಯಕ್ತಿಯ ಜತೆ 25 ವರ್ಷದ ಯುವತಿಯ ಮದುವೆಯಾಗಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಈ ಫೋಟೋಗೆ ಕೆಲವರಿಂದ ಆಕ್ಷೇಪ ವ್ಯಕ್ತವಾಗಿದ್ದರೆ, ಇನ್ನು ಕೆಲವರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇಳಲು ವಿಚಿತ್ರ ಎನಿಸಿರುವ ಈ ಘಟನೆಯು ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ನಡೆದಿದೆ. ಬಲ್ಲೂರಾಮ್​ ಎಂಬಾತನೇ ವರನಾಗಿದ್ದು, ಅಂಗವಿಕಲೆ ವಿನೀತಾ ವಧುವಾಗಿದ್ದಾಳೆ.

ನವರಂಗಪುರದ ಗ್ರಾಮದ ಬಲ್ಲೂರಾಮ್​ ವೃತ್ತಿಯಿಂದ ಪೂಜಾರಿಯಾಗಿದ್ದು, ತಾನು ಯಾವುದೇ ಕಾರಣಕ್ಕೂ ಮದುವೆಯಾಗುವುದಿಲ್ಲ ಎಂದು ನಿರ್ಧಾರ ಮಾಡಿದ್ದ. ಅದರಂತೆ 55 ವರ್ಷವಾದರೂ ಮದುವೆಯಾಗದೆ ದೇಗುಲದಲ್ಲಿ ದೇವರ ಸೇವೆ ಮಾಡಿಕೊಂಡಿದ್ದ.

ಇತ್ತ ಬಾಸ್ ಗ್ರಾಮದಲ್ಲಿ 25 ವರ್ಷದ ವಿನೀತಾ ತಂದೆ-ತಾಯಿ, ತಮ್ಮ ಮಗಳಿಗೆ ಯಾವ ರೀತಿಯ ಗಂಡು ಸಿಗುತ್ತಾನೋ? ಸಿಕ್ಕರೂ ಆಕೆಯ ಹಾಗೇ ಇರುವ ಅಂಗವಿಕಲ ವರ ಸಿಗಬಹುದೆಂದು ಭಾವಿಸಿ ಅವಳಿಗೆ ವರ ಹುಡುಕುವುದನ್ನು ಕೂಡ ಕೈಬಿಟ್ಟಿದ್ದರು. ಅಲ್ಲದೇ, ಅಂಗವಿಕಲೆ ಆಗಿರುವ ತಮ್ಮ ಮಗಳಿಗೆ ವರನನ್ನು ಹುಡುಕಿ ಹುಡುಕಿ ಸುಸ್ತಾಗಿ ಕೊನೆಗೆ ಮದುವೆ ಮಾಡದೇ ಇರಲು ನಿರ್ಧರಿಸಿದ್ದರು.

ಇದೇ ಸಂದರ್ಭದಲ್ಲಿ ಬಲ್ಲೂರಾಮ್​ನಿಗೆ ವಿನೀತಾ ಬಗ್ಗೆ ಮಾಹಿತಿ ತಿಳಿದ ತಕ್ಷಣವೇ ತಾನು ಮದುವೆಯಾಗುತ್ತೇನೆಂದು ಸಂಬಂಧಿಕರ ಮುಂದೆ ಹೇಳಿದ್ದ. ಈ ವಿಷಯ ಕುರಿತು ಹುಡುಗಿಯವರ ಮನೆಯಲ್ಲಿ ಮದುವೆಯ ಪ್ರಸ್ತಾಪ ಮಾಡಿದಾಗ, ಆಕೆಯ ತಂದೆ-ತಾಯಿ ಏನು ಮಾಡಬೇಕೆಂದು ತಿಳಿಯದೇ ಸುಮ್ಮನಾಗಿದ್ದರು. ಕೊನೆಗೆ ಒಮ್ಮತ ನಿರ್ಧಾರ ತೆಗೆದುಕೊಂಡ ಮೇಲೆ ವಿನೀತಾ ಹಾಗೂ ಬಲ್ಲೂರಾಮ್​ ಮದುವೆ ನಿಶ್ಚಯ ಮಾಡಿ, ವಿಧಿ-ವಿಧಾನಗಳೊಂದಿಗೆ ಸಂಪ್ರದಾಯಬದ್ಧವಾಗಿ ಈ ಮದುವೆಯನ್ನು ಮಾಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net