510 ಪ್ಯಾಕೆಟ್ ತಂಬಾಕು ಉತ್ಪನ್ನ ವಶ, ಓರ್ವ ಸೆರೆ

Tobacco
Published on

ಕುಂಬಳೆ: ಮಾರಾಟಕ್ಕಾಗಿ ಸಾಗಿಸುತ್ತಿದ್ದ 510 ಪ್ಯಾಕೆಟ್ ತಂಬಾಕು ಉತ್ಪನ್ನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಬಾಡೂರು ಜಾವ ಹೌಸ್‌ನ ಅಬ್ದುಲ್ ಖಾದರ್(38) ಎಂಬಾತನನ್ನು ಬಂಧಿಸಲಾಗಿದೆ. ಕುಂಬಳೆ ಎಸ್‌ಐ ಉಮೇಶ್ ನೇತೃತ್ವದ ಪೊಲೀಸರು ಬುಧವಾರ ಸಂಜೆ ಕಟ್ಟಿತ್ತಡ್ಕ ಮುಂಡಕ್ಕಾನದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಅಬ್ದುಲ್ ಖಾದರ್ ಚೀಲದಲ್ಲಿ ತಂಬಾಕು ಉತ್ಪನ್ನಗಳೊಂದಿಗೆ ರಸ್ತೆ ಬದಿ ನಿಂತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net