ಶೌಚಗೃಹ ಹೊಂಡದಲ್ಲಿ ಸಿಲುಕಿಕೊಂಡ ಕಾಡುಹಂದಿ

piggggg
Published on

ಕುಂಬಳೆ: ನೂತನವಾಗಿ ನಿರ್ಮಿಸುತ್ತಿರುವ ಮನೆಯ ಸಮೀಪ ಶೌಚಾಲಯದ ಹೊಂಡಕ್ಕೆ ಕಾಡುಹಂದಿ ಬಿದ್ದು ಸಿಲುಕಿಕೊಂಡ ಘಟನೆ ನಡೆದಿದೆ. ಸಾಮಾಜಿಕ ಕಾರ್ಯಕರ್ತ ಕೊಡ್ಯಮೆ ಉಜಾರಿನ ಇಬ್ರಾಹಿಂ ಎಂಬುವರು ನೂತನವಾಗಿ ನಿರ್ಮಿಸುತ್ತಿರುವ ಶೌಚಗೃಹ ಗುಂಡಿಗೆ ಕಾಡುಹಂದಿ ಬಿದ್ದಿದೆ. ಈ ಬಗ್ಗೆ ಅವರು ಅಗ್ನಿಶಾಮಕದಳಕ್ಕೆ ಕರೆಮಾಡಿ ವಿಷಯ ತಿಳಿಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸುವಂತೆ ನಿರ್ದೇಶಿಸಿದ್ದಾರೆ. ಇದರಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿದರೂ ಯಾರೂ ಫೋನ್ ಎತ್ತಲಿಲ್ಲ. ಅನಂತರ ಜಿಲ್ಲಾಧಿಕಾರಿಗೆ ಕರೆ ಮಾಡಿ ವಿಷಯ ತಿಳಿಸಲಾಯಿತು. ಅಲ್ಪಹೊತ್ತಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಪೋನ್ ಕರೆಮಾಡಿ ಸಂಪರ್ಕಿಸಿ ಬಳಿಕ ಅಧಿಕಾರಿಗಳು ಹಂದಿಯನ್ನು ಹೊಂಡದಿಂದ ಮೇಲಕ್ಕೆತ್ತಿ ಗೂಡಿನೊಳಗೆ ಹಾಕಿ ಕೊಂಡೊಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net