

ಬೆಂಗಳೂರು: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ನಿಮಿತ್ತ ಭಾನುವಾರ (ಸೆ.15) ಹೊಸಕೋಟೆ ಟೋಲ್ ರಸ್ತೆಯಿಂದ ರಾಮನಗರ ಸಿಟಿವರೆಗೆ ಅಂದಾಜು 51 ಕಿ.ಮೀ.ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಹೇಳಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೀದರ್ನಿಂದ ಚಾಮರಾಜನಗರವರೆಗೆ ಅಂದರೆ 2,800 ಕಿ.ಮೀ. ಮಾನವ ಸರಪಳಿ ರಚಿಸುವ ಮೂಲಕ ಪ್ರಜಾಪ್ರಭುತ್ವ ದಿನ ಆಚರಿಸಲು ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಹೊಸಕೋಟೆ ಟೋಲ್ ರಸ್ತೆಯಿಂದ ಆರಂಭವಾಗುವ ಮಾನವ ಸರಪಳಿ ಕಾರ್ಯಕ್ರಮವು,ಕೆ.ಆರ್.ಪುರಂ, ಇಂದಿರಾನಗರ, ಎಂ.ಜಿ.ರಸ್ತೆ, ವಿಧಾನಸೌಧ, ಮೆಸೂರು ರಸ್ತೆ, ನಾಯಂಡಹಳ್ಳಿ, ಕೆಂಗೇರಿ, ಕುಂಬಳಗೊಡು, ಹೆಜ್ಜಾಲ ಬಸ್ ನಿಲ್ದಾಣ, ರಾಮನಗರ ಜಿಲ್ಲೆಯ ಪ್ರವೇಶವರೆಗೂ ನಡೆಯಲಿದೆ ಎಂದರು.
ಪ್ರಜಾಪ್ರಭುತ್ವದ ತತ್ವಗಳನ್ನು ಸಾರ್ವಜನಿಕರಿಗೆ ತಿಳಿಸುವುದು, ಮಾನವ ಹಕ್ಕುಗಳ ರಣೆ, ಅಭಿವೃದ್ಧಿ, ಶಾಂತಿ, ಸ್ಥಿರತೆ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ್ತು ಅದರ ಮೌಲ್ಯಗಳನ್ನು ಎತ್ತಿ ಹಿಡಿಯಲು ಪ್ರಜಾಪ್ರಭುತ್ವದ ದಿನ ಆಚರಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಅಂದಾಜು 50 ಸಾವಿರ ವಿದ್ಯಾರ್ಥಿಗಳು, ಸಂಟನೆಗಳು,ಸಾರ್ವಜನಿಕರು ಭಾಗಿಯಾಗಲಿದ್ದಾರೆ. ನೂರು ಮೀಟರ್ಗೆ ಓರ್ವ ಮಾನಿಟರ್, 2 ಕಿ.ಮೀ.ಗೆ ಕ್ಯಾಪ್ಟನ್ ಮತ್ತು 5 ಕಿ. ಮೀ.ಗೆ ಓರ್ವ ಕಮಾಂಡೋ ನೇಮಿಸಲಾಗಿದೆ. ಕಾರ್ಯಕ್ರಮದ ನೆನಪಿಗೆ ಮಾನವ ಸರಪಳಿ ಸಾಗುವ ಮಾರ್ಗದಲ್ಲಿ 10 ಲ ಗಿಡ ನೆಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.