ಜುವೆಲ್ಲರಿ ಶಾಪ್​ನಲ್ಲಿ 50 ಕೆಜಿ ಬೆಳ್ಳಿ ದರೋಡೆ, ಕಳ್ಳರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

stolen
Published on

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಜುವೆಲ್ಲರಿ ಶಾಪ್​ಗೆ ಕನ್ನಹಾಕಿದ ದುಷ್ಕರ್ಮಿಗಳು ಲಕ್ಷಾಂತರ ರೂ. ಮೌಲ್ಯದ ಆಭರಣ ದೋಚಿದ್ದಾರೆ.

ವೈಟ್​ಫೀಲ್ಡ್​​ನ ಇಮ್ಮಡಿಹಳ್ಳಿ ಮುಖ್ಯರಸ್ತೆಯ ಮಾತಾ ಜುವೆಲ್ಲರಿ ಮಳಿಗೆಯಲ್ಲಿ ಆ.5ರ ಬೆಳಗಿನ ಜಾವ ಈ ದುಷ್ಕೃತ್ಯ ನಡೆದಿದೆ. ಬರೋಬ್ಬರಿ 35 ಲಕ್ಷ ರೂ. ಮೌಲ್ಯದ 50 ಕೆಜಿ ಬೆಳ್ಳಿ ಆಭರಣಗಳನ್ನು ಖತರ್ನಾಕ್ ಕಳ್ಳರು ದೋಚಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಾತಾ ಜುವೆಲ್ಲರಿ ಮಳಿಗೆಯ ಪಕ್ಕದ ಗ್ರಂಧಿಗೆ ಅಂಗಡಿಯಿಂದ ಕಿಟಕಿ ಸರಳು ಮುರಿದು ಒಳನುಗ್ಗಿರುವ ಮೂವರು ಕಳ್ಳರು ಆಭರಣ ಮಳಿಗೆಯಲ್ಲಿ ಕನ್ನ ಕೊರೆದು ಆಭರಣ ಹೊತ್ತೊಯ್ದಿದ್ದಾರೆ. ಚಿನ್ನಾಭರಣದ ಲಾಕರ್ ಒಡೆಯಲಾಗದೇ ಬೆಳ್ಳಿ ಆಭರಣಗಳನ್ನು ಮಾತ್ರ ಕದ್ದೊಯ್ದಿದ್ದಾರೆ.

ಕಳ್ಳತನ ಕೃತ್ಯದ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈಟ್​ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ತನಿಖೆ ಚುರುಕುಗೊಳಿಸಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net