ಇದು ಜಗತ್ತಿನ ಅತ್ಯಂತ ಹಳೆಯ ಸಂಗೀತ ಸಾಧನ: ಇಲ್ಲಿದೆ ದಿವ್ಜೆ ಬೇಬ್ ಕೊಳಲು ಕುರಿತ ಅಚ್ಚರಿ ಸಂಗತಿ

Divje Babe
Published on

ಲುಬ್ಲಿಯಾನಾ: ಪ್ರಾಚೀನ ಕಾಲದ ಅನೇಕ ಸಂಗೀತ ಸಾಧನಗಳ ಬಗ್ಗೆ ನಾವು ಕೇಳಿದ್ದೇವೆ ಮತ್ತು ನೋಡಿದ್ದೇವೆ. ಆದರೆ, 1995ರಲ್ಲಿ ಪತ್ತೆಯಾದ ಕೊಳಲನ್ನು ಜಗತ್ತಿನಲ್ಲೇ ಅತ್ಯಂತ ಹಳೆಯ ಸಂಗೀತ ಸಾಧನವೆಂದು ಪರಿಗಣಿಸಲಾಗಿದೆ. ಪುರಾತತ್ವಶಾಸ್ತ್ರಜ್ಞರು ಪತ್ತೆಹಚ್ಚಿರುವ ಈ ಸಂಗೀತ ಸಾಧನವು 50 ಸಾವಿರ ವರ್ಷಗಳಷ್ಟು ಹಳೆಯದ್ದು ಎಂದು ಹೇಳಲಾಗಿದೆ.

ಇಂದಿಗೂ ನುಡಿಸಬಹುದು

ಸ್ಲೊವೇನಿಯಾದ ದಿವ್ಜೆ ಬೇಬ್ ಗುಹೆಯಲ್ಲಿ ಪತ್ತೆಯಾದ ಕೊಳಲನ್ನು ದಿವ್ಜೆ ಬೇಬ್ ಕೊಳಲು ಹಾಗೂ ನಿಯಾಂಡರ್ತಲ್ ಕೊಳಲೆಂದು ಕರೆಯಲಾಗುತ್ತದೆ. 1995ರಲ್ಲಿ ಇವಾನ್​ ಟರ್ಕ್​ ಹೆಸರಿನ ಪುರಾತತ್ವಶಾಸ್ತ್ರಜ್ಞರು ಇದ್ರಿಕಾ ನದಿ ಪಕ್ಕದಲ್ಲಿ ಉತ್ಖನನ ಮಾಡುವಾಗ ಮೂಳೆಗಳಿಂದ ಮಾಡಿದ ಮತ್ತು ನಿಯಾಂಡರ್ತಲ್​ ಜನಾಂಗ ಬಳಸುತ್ತಿದ್ದ ಕೊಳಲನ್ನು ಪತ್ತೆಹಚ್ಚಲಾಯಿತು. ಇಂದಿಗೂ ಈ ಕೊಳಲು ಅದ್ಭುತವಾಗಿ ಕಾರ್ಯನಿರ್ವಹಿಸುತ್ತದೆ. ಈ ವಿಶೇಷವಾದ ಕೊಳಲನ್ನು ಸ್ಲೋವೆನಿಯಾದ ರಾಷ್ಟ್ರೀಯ ಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇಡಲಾಗಿದೆ.

ಇದು ವಿಶ್ವದ ಅತ್ಯಂತ ಹಳೆಯ ಕೊಳಲಾಗಿದ್ದು, ಮೂರು ಪಂಕ್ಚರ್ ರಂಧ್ರಗಳನ್ನು ಸರಿಪಡಿಸಲಾಗಿದೆ. ನಿಯಾಂಡರ್ತಲ್​ಗಳು ಮೊದಲು ಸಂಗೀತ ವಾದ್ಯಗಳನ್ನು ತಯಾರಿಸಿದರು ಎಂದು ಹೇಳಲಾಗಿದೆ. ಈ ಜನಾಂಗದವೇ ಸಂಗೀತವನ್ನು ಮೊದಲು ರಚಿಸಿದ್ದಾರೆ ಎಂಬುದಕ್ಕೆ ಈ ಕೊಳಲು ಆಧಾರವಾಗಿದೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net