ಗ್ರಾಪಂ ನೌಕರರಿಗೆ 50 ಸಾವಿರ ರೂ. ವೈದ್ಯಕೀಯ ವೆಚ್ಚ ನೀಡಲು ಆದೇಶ

vidhanasoudha
Published on

ಬೆಂಗಳೂರು: ಗ್ರಾಮ ಪಂಚಾಯಿತಿ ನೌಕರರು ಅನಾರೋಗ್ಯಕ್ಕೆ ಒಳಗಾದಾಗ ಚಿಕಿತ್ಸಾ ವೆಚ್ಚವನ್ನು ಜಿಲ್ಲಾ ಪಂಚಾಯಿತಿ ಆಶ್ವಾಸನಾ ನಿಧಿಯಿಂದ ಭರಿಸುವ ಕುರಿತು ಸರ್ಕಾರ ಆದೇಶ ಹೊರಡಿಸಿದೆ.

ಗ್ರಾಮ ಪಂಚಾಯಿತಿ ನೌಕರರಿಗೆ ತೀವ್ರ ಸ್ವರೂಪದ ಕಾಯಿಲೆಗಳಾದ ಹೃದ್ರೋಗ ಶಸ ಚಿಕಿತ್ಸೆ, ಕ್ಯಾನ್ಸರ್, ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್, ಡಯಾಲಿಸಿಸ್ ಮತ್ತು ಮೂತ್ರ ಪಿಂಡ ಕಾಯಿಲೆಗಳಿಗೆ ತುತ್ತಾದಲ್ಲಿ ವೈದ್ಯಕೀಯ ವೆಚ್ಚ ಗರಿಷ್ಠ 50 ಸಾವಿರ ರೂ.ಗಳನ್ನು ಒಂದು ಬಾರಿ ಮಾತ್ರ ನೀಡಲು ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಸೂಚಿಸಲಾಗಿದೆ.

ಕೋವಿಡ್ ಸಂದರ್ಭದಲ್ಲಿ ಕೋವಿಡ್ ಸಾಂಕ್ರಾಮಿಕದಿಂದ ಮರಣ ಹೊಂದಿದ ಕುಟುಂಬದವರಿಗೆ ಪರಿಹಾರ ನೀಡಲು ಹಾಗೂ ಅನಾರೋಗ್ಯ ಉಂಟಾದಲ್ಲಿ ಚಿಕಿತ್ಸಾ ವೆಚ್ಚ ಭರಿಸಲು ಜಿಲ್ಲಾ ಪಂಚಾಯಿತಿಗಳಲ್ಲಿ ಆಶ್ವಾಸನಾ ನಿಧಿ ರಚಿಸಲು ಆದೇಶಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net