

ಅಹಮದಾಬಾದ್ ನಗರದಲ್ಲಿ ಮಾಸ್ಕ್ ಧರಿಸದೆ ಮನೆಯಿಂದ ಹೊರಗೆ ಬರುವವರಿಗೆ 5000 ರೂಪಾಯಿ ದಂಡ ಅಥವಾ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಅಲ್ಲಿನ ಸ್ಥಳೀಯ ಆಡಳಿತ ನಿರ್ಧರಿಸಿದೆ.
ಅಗತ್ಯ ಸೇವೆ ಒದಗಿಸುತ್ತಿರುವವರು, ದಿನಸಿ, ತರಕಾರಿ ಅಂಗಡಿಯವರು ಮಾಸ್ಕ್ ಧರಿಸುವುದು ಕಡ್ಡಾಯ. ಮನೆಯಲ್ಲಿಯೇ ತಯಾರಿಸಿದ ಮಾಸ್ಕ್, ಮೆಡಿಕಲ್ನಲ್ಲಿ ಮಾರಾಟ ಮಾಡಲಾಗಿರುವ ಮಾಸ್ಕ್ ಅಥವಾ ಕರವಸ್ತ್ರದಿಂದ ಬಾಯಿ, ಮೂಗನ್ನು ಮುಚ್ಚಿಕೊಳ್ಳದೆ ಯಾರೂ ಮನೆಯಿಂದ ಹೊರಗೆ ಬರುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ.