ಟೊಮ್ಯಾಟೋಗಾಗಿ ಸುಮಾರು 500 ಜನರಿಂದ ಬೆಳ್ಳಂ ಬೆಳಿಗ್ಗೆ ಸರದಿ ಸಾಲು..!

tomato que
Published on

ನೋಯ್ಡಾ: ಸಬ್ಸಿಡಿ ದರದ ಟೊಮೆಟೊ ಖರೀದಿಸಲು ಬೆಳಗ್ಗೆ ಸುಮಾರು 500 ಮಂದಿ ಸರತಿ ಸಾಲಿನಲ್ಲಿ ನಿಂತಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್-4ನಲ್ಲಿ ನಡೆದಿದೆ.

ನ್ಯಾಷನಲ್ ಕೋಆಪರೇಟಿವ್ ಕನ್ಸೂಮರ್ಸ್ ಫೆಡರೇಶನ್ ಆಫ್ ಇಂಡಿಯಾ (ಎನ್‌ಸಿಸಿಎಫ್) ಕಚೇರಿಯಿಂದ ಟೊಮೆಟೊಗಳನ್ನು ಸಬ್ಸಿಡಿ ದರದಲ್ಲಿ ಮಾರಾಟ ಮಾಡಲಾಗಿದ್ದು, ಕೆಜಿಗೆ 70 ರೂ. ದರ ನಿಗದಿಪಡಿಸಲಾಗಿತ್ತು. ಸುದ್ದಿ ತಿಳಿಯುತ್ತಿದ್ದಂತಯೇ ಸ್ಥಳದಲ್ಲಿ ಜಮಾಯಿಸಿದ ಜನರು, ಟೊಮ್ಯಾಟೋಗಾಗಿ ಮುಗಿಬೀಳದೆ ಸರದಿ ಸಾಲಿನಲ್ಲಿ ನಿಂತಿದ್ದಾರೆ.

ತಮ್ಮ ಸರದಿಗಾಗಿ ಎರಡು ಗಂಟೆಗಳವರೆಗೆ ತಾಳ್ಮೆಯಿಂದ ಸರದಿಯಲ್ಲಿ ನಿಂತ ಜನರು ತಮ್ಮ ಪಾಲಿನ ಟೊಮ್ಯಾಟೋವನ್ನು ಖರೀದಿಸಿದ್ದು, ಇತರ ತರಕಾರಿಗಳ ಬೆಲೆಗಳು ತೀವ್ರವಾಗಿ ಏರಿದೆ ಸರ್ಕಾರವು ಇದರ ಬಗ್ಗೆ ಪರಿಶೀಲಿಸಬೇಕು ಎಂದು ಹೇಳಿದ್ದಾರೆ. ಮೊದಲು ಬಂದವರಿಗೆ ಆದ್ಯತೆ ಎನ್ನುವ ತತ್ವದ ಆಧಾರದ ಮೇಲೆ ಟೊಮ್ಯಾಟೋವನ್ನು ಮಾರಾಟ ಮಾಡಲಾಗಿದ್ದು, ಪ್ರತಿಯೊಬ್ಬ ವ್ಯಕ್ತಿಗೆ ಕೇವಲ 1 ಕೆಜಿ ಖರೀದಿಸಲು ಅವಕಾಶ ನೀಡಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. NCCF ಕಚೇರಿಯು ಬರೊಬ್ಬರಿ 500 ಕೆಜಿಗಳಷ್ಟು ಟೊಮ್ಯಾಟೋ ಮಾರಾಟ ಮಾಡಿದ್ದು, ಹಠಾತ್ ಬೆಲೆ ಏರಿಕೆಯು ನಾಗರಿಕರ ಜೀವನದ ಮೇಲೆ ಪರಿಣಾಮ ಬೀರಿದೆ.

ಎನ್‌ಸಿಸಿಎಫ್ ಕಡಿಮೆ ದರದಲ್ಲಿ ಟೊಮೇಟೊ ಮಾರಾಟ ಮಾಡುತ್ತಿದೆ ಎಂದು ಗ್ರಾಹಕರೊಬ್ಬರು ಹೇಳಿದ್ದರಿಂದ ತಾನು ಇಲ್ಲಿಗೆ ಬಂದಿದ್ದೇನೆ. ಜನರು ಬೇರೆ ಬೇರೆ ಕೆಲಸಗಳನ್ನು ಹೊಂದಿದ್ದಾರೆ. ಎಲ್ಲವನ್ನೂ ಬಿಟ್ಟು ಟೊಮ್ಯಾಟೋಗಾಗಿ ಸಾಲಿನಲ್ಲಿ ನಿಲ್ಲುವುದು ಕಷ್ಟಸಾಧ್ಯ ಎಂದು ಜನರು ಹೇಳಿದ್ದಾರೆ.

ಇದನ್ನೂ ಓದಿ: ದೈವ ದರ್ಶನಕ್ಕೆಂದು ಹೊರಟು ನಡುರಸ್ತೆಯಲ್ಲೇ ದೇವರ ಪಾದ ಸೇರಿದ ಐದು ಭಕ್ತರು..

ಟೊಮೆಟೊ ವಿತರಣೆಯ ಉಸ್ತುವಾರಿ ಎನ್‌ಸಿಸಿಎಫ್ ನೋಯ್ಡಾ ಅಧಿಕಾರಿ ಸುಮಿತ್ ಕುಮಾರ್ ಪ್ರಕಾರ, ಫೆಡರೇಶನ್ ಕಳೆದ ಎರಡು ವಾರಗಳಿಂದ ನೋಯ್ಡಾ, ದೆಹಲಿ, ಕಾನ್ಪುರ, ಜೈಪುರ ಮತ್ತು ಇತರ ನಗರಗಳಲ್ಲಿ ಕಡಿಮೆ ಬೆಲೆಗೆ ಟೊಮೆಟೊಗಳನ್ನು ಮಾರಾಟ ಮಾಡುತ್ತಿದೆ. ತಾವು ಪ್ರತಿದಿನ ದೆಹಲಿಯ ಕೇಂದ್ರ ಕಚೇರಿಯಿಂದ ಟೊಮೆಟೊ ಸರಬರಾಜುಗಳನ್ನು ಪಡೆಯುದ್ದೇವೆ. ತಾವು ಮೊದಲು ಒಬ್ಬ ವ್ಯಕ್ತಿಗೆ 2 ಕೆಜಿ ಮಾರಾಟಕ್ಕೆ ಅವಕಾಶ ನೀಡುತ್ತಿದ್ದೆವು. ಆದರೆ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ನಾವು ಈಗ ಒಬ್ಬ ವ್ಯಕ್ತಿಗೆ 1 ಕೆಜಿ ಮಾತ್ರ ಮಾರಾಟ ಮಾಡಲು ಪ್ರಾರಂಭಿಸಿದ್ದೇವೆ ಎಂದು ಹೇಳಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net