

ಸಿಂಗ್ರೌಲಿ: ಬಿಜೆಪಿ ಶಾಸಕರ ಪುತ್ರನೊಬ್ಬ ಬುಡಕಟ್ಟು ಜನಾಗಂದ ವ್ಯಕ್ತಿಗೆ ಗುಂಡು ಹಾರಿಸಿರುವ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ನಡೆದಿದೆ.
ವಿವೇಕಾನಂದ್ ವೈಶ್ಯ(40) ಗುಂಡು ಹಾರಿಸಿದ ಆರೋಪಿಯಾಗಿದ್ದು, ಆತ ಬಿಜೆಪಿ ಶಾಸಕ ರಾಮ್ ಲಲ್ಲು ವೈಶ್ಯರ ಪುತ್ರನಾಗಿದ್ದಾನೆ. ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, 34 ವರ್ಷದ ಸೂರ್ಯ ಕುಮಾರ್ ಖೈರ್ವಾರ್ ಎಂಬಾತನ ಬಲಗೈ ಮಣಿಕಟ್ಟಿಗೆ ಗಾಯವಾಗಿದೆ.
ಇದನ್ನೂ ಓದಿ: ಅಪ್ರಾಪ್ತ ವಯಸ್ಸಿನ ಮಗನನ್ನು ಥಳಿಸಿದ ತಂದೆ: ಕೋಲು ಮುರಿದರೂ ಬಿಡಲಿಲ್ಲ..
ಪೊಲೀಸರ ಪ್ರಕಾರ, ಆರೋಪಿಯು ಸ್ಥಳೀಯ ದೇವಸ್ಥಾನದ ಬಳಿಯ ಕಿರಿದಾದ ರಸ್ತೆಯಲ್ಲಿ ಜನರ ಗುಂಪಿನೊಂದಿಗೆ ವಾಗ್ವಾದ ನಡೆಸಿದರು. ಈ ವೇಳೆ ಸೂರ್ಯ ಕುಮಾರ್ ಬುಡಕಟ್ಟು ಜನಾಂಗದ ಗುಂಪಿನೊಂದಿಗೆ ಸೇರಿಕೊಂಡು ಜಗಳವಾಡಲು ಪ್ರಾರಂಭಿಸಿದರು. ಆಗ ಆರೋಪಿಯು, ಸೂರ್ಯ ಕುಮಾರ್ ಮೇಲೆ ಗುಂಡು ಹಾರಿಸಿದ್ದು ಗುಂಡು ಆತನ ಬಲಗೈ ಮಣಿಕಟ್ಟಿಗೆ ತಗುಲಿದೆ.
ಕೂಡಲೇ ಸೂರ್ಯ ಕುಮಾರ್ನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಆರೋಗ್ಯ ಸ್ಥಿರವಾಗಿದೆ ಎಂದು ಇನ್ಸ್‌ಪೆಕ್ಟರ್ ಪರಿಹಾರ್ ತಿಳಿಸಿದ್ದಾರೆ. ಘಟನೆಯ ನಂತರ, ಶಾಸಕರ ಪುತ್ರನ ವಿರುದ್ಧ ಪ್ರಕರಣ ದಾಖಲಾಗಿದ್ದು, ಈಗಾಗಲೇ ಆರೋಪಿಯು ಈ ಹಿಂದೆ ಮತ್ತೊಂದು ಪ್ರಕರಣದಲ್ಲಿ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾನೆ. ರಾಮ್ ಲಲ್ಲು ಸಿಂಗ್ರೌಲಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಇನ್ಸ್‌ಪೆಕ್ಟರ್ ಅಶೋಕ್ ಸಿಂಗ್ ಪರಿಹಾರ್ ಹೇಳಿದ್ದಾರೆ.(ಏಜೆನ್ಸೀಸ್)