ಈತ 50 ವರ್ಷಗಳಿಂದ ಅಂಗಿ ಹಾಕಿಲ್ಲ! ಹೆಂಡ್ತಿ ಹೋದರೂ ಪರವಾಗಿಲ್ಲ, ನಾನು ಅಂಗಿ ಹಾಕಿಕೊಳ್ಳಲ್ಲ..Not Wearing Shirt

Not Wearing Shirt
Published on

ತೆಲಂಗಾಣ: (Not Wearing Shirt ) ಇಲ್ಲೊಬ್ಬ ವ್ಯಕ್ತಿಗೆ ಅಂಗಿ ಹಾಗುವುದು ಅಂದ್ರೆ ಆಗಲ್ಲ.. ಮಳೆ ಬಂದರೂ ಅಷ್ಟೇ. ಯಾವುದೇ ಕಾರ್ಯಕ್ರಮ ಇದ್ದರು ಅಷ್ಟೆ ಅವನು ಯಾಕೆ ಅಂಗಿ ಧರಿಸಿಲ್ಲ? ಈತನ ಬಗ್ಗೆ ಸ್ಥಳೀಯರು ಏನು ಹೇಳುತ್ತಾರೆಂದು ತಿಳಿಯೋಣ....

ಜಗಿತ್ಯಾಲ ಜಿಲ್ಲೆಯ ಕೋರುಟ್ಲ ಮಂಡಲದ ಐಲಾಪುರ ಗ್ರಾಮದ ನಿವಾಸಿಯಾಗಿರುವ ಮುಕ್ಕೇರ ಬಕ್ಕಯ್ಯ ಅವರನ್ನು ಹಳ್ಳಿಯ ಎಲ್ಲರೂ ಅವರನ್ನು ಗಾಂಧಿ ಎಂದು ಕರೆಯುತ್ತಿದ್ದರು. ಕಾರಣ ಅವರು ಅಂಗಿ ಹಾಕಿಲ್ಲ. ಈ ವ್ಯಕ್ತಿ  ಸರಿಸುಮಾರೂ 50 ವರ್ಷದಿಂದ ಅಂಗಿಯನ್ನೇ ಹಾಕಿಲ್ಲ.   ತಂದೆ-ತಾಯಿ ಆರ್ಥಿಕ ಪರಿಸ್ಥಿತಿಯಿಂದಾಗಿ ಬಕ್ಕಣ್ಣನಿಗೆ ಚಿಕ್ಕವನಿದ್ದಾಗ ಅಂಗಿ ಕೊಡಿಸಿರಲಿಲ್ಲ.  ಇದೇ ಅವನ ಅಭ್ಯಾಸವಾಯಿತು. ಬಾಕಣ್ಣ ಹುಟ್ಟಿದಾಗಿನಿಂದ ಅಂಗಿ ಹಾಕಿಕೊಂಡಿಲ್ಲ.

ಬಕ್ಕಣ್ಣನ ಮದುವೆಯ ಸಂದರ್ಭದಲ್ಲೂ ಅಂಗಿ ಧರಿಸಿರಲಿಲ್ಲ. ಹೆಂಡತಿ ಎಷ್ಟೇ  ಕೇಳಿಕೊಂಡರೂ ಬಕ್ಕಣ್ಣ ಮಾತ್ರ... ತನಗೆ ಅಂಗಿ ಇಷ್ಟವಿಲ್ಲ ಎಂದು ಹೇಳುತ್ತಿದ್ದನು. ಈ ಮಾತಿನಿಂದ  ಬೇಸತ್ತ ಪತ್ನಿ ನಾನು ನಿಮ್ಮ ಜೊತೆ ಇರಬೇಕಾದರೆ ಅಂಗಿ ಹಾಕಿಕೊಳ್ಳಬೇಕು, ಇಲ್ಲವಾದಲ್ಲಿ ಹೋಗುತ್ತೇನೆ ಎಂದು ಹೇಳಿದ್ದಳು. ಬಕ್ಕಯ್ಯ ನೀನು ಹೋದರೂ ಪರವಾಗಿಲ್ಲ, ಆದರೆ ನಾನು ಅಂಗಿ ಹಾಕಿಕೊಳ್ಳುವುದಿಲ್ಲ ಎಂದು ನಿರ್ಧರಿಸಿರುವುದಾಗಿ ಆಕೆಗೆ ಹೇಳಿದ್ದನು ಎನ್ನಲಾಗಿದೆ.

ಚಳಿ, ಮಳೆಗಾಲ, ಬೇಸಿಗೆ ಕಾಲ ಎಂದರೂ ಅಂಗಿ ಹಾಕುವುದಿಲ್ಲ. ಎಲ್ಲೆಂದರಲ್ಲಿ ಅಂಗಿ ಹಾಕದೆ ಹೋಗುತ್ತಾನೆ. ಈ ಹಿಂದೆ ವಾರ್ಡ್ ಸದಸ್ಯರಾಗಿ ಕೆಲಸ ಮಾಡಿದ ಬಕ್ಕಯ್ಯ, ಮೈಮೇಲೆ ಅಂಗಿ ಹಾಕಿಕೊಂಡರೆ ಬೆವರು ಬರುತ್ತೆ, ಅದಕ್ಕೇ 50 ವರ್ಷಗಳಿಂದ ಅಂಗಿ ಹಾಕಿಲ್ಲ ಎಂದು ಸಭೆ, ಸಮಾರಂಭಗಳಿಗೆ ಅಂಗಿ ಹಾಕದೆ ಹೋಗುತ್ತಿದ್ದನು. ಈ ಚಳಿಯಲ್ಲೂ ಅಂಗಿ ಹಾಕದಿರುವುದು ನಿಜಕ್ಕೂ ವಿಚಿತ್ರ ಎನ್ನುತ್ತಾರೆ  ಈತನ ಕುಟುಂಬಸ್ಥರು ಹಾಗೂ ಸ್ಥಳೀಯರು....

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net