

ಮಹಾರಾಷ್ಟ್ರ: ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಭಾರೀ ಮಳೆ ಸುರಿದಿದ್ದು, ವರುಣಾರ್ಭಟಕ್ಕೆ ಜನಜೀವನ್ ಅಸ್ತವ್ಯಸ್ತಗೊಂಡಿದೆ.
ಗಾಳಿ ಮಳೆ ಜತೆಗೆ ಸಿಡಿಲು ಬಡಿತಕ್ಕೆ 26 ವರ್ಷದ ಪುರುಷ ಮತ್ತು 50 ವರ್ಷದ ಮಹಿಳೆ ಇನ್ನರೂ ಸಾವನ್ನಪ್ಪಿದ್ದಾರೆ. ಅಲ್ಲದೆ, ಸಿಡಿಲು ಬಡಿದು ಮೂರು ಪ್ರಾಣಿಗಳು ಸಾವನ್ನಪ್ಪಿವೆ.
ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಮಳೆಯ ಆರ್ಭಟದಿಂದಾಗಿ ಪೈಗಂಗಾ ನದಿಯ ಸಹಸ್ತ್ರಕುಂಡ್ ಜಲಪಾತವು ಧಾರಾಕಾರವಾಗಿ ಹರಿಯುತ್ತಿದೆ.
ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿರುವ ಹಲವು ನದಿಯ ಬಲವಾದ ಪ್ರವಾಹ ಒಂದೆಡೆಯಾದ್ರೆ ಅಂತಹ ನದಿಯ ಹತ್ತಿರದಲ್ಲಿ ವಾಸಿಸುತ್ತಿರುವ ಜನರಿಗೆ ಸೇತುವೆಯನ್ನು ದಾಟಲು ಒತ್ತಾಯಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗಬೇಕೆಂದು ಸರ್ಕಾರ ಆದೇಶಿಸಿದೆ.
ಶುಕ್ರವಾರದಂದು ಏಕಾಂಬದ 50 ವರ್ಷದ ಮಹಿಳೆ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಧ್ಯಾಹ್ನ 12.30ರ ಮತ್ತೊಮ್ಮೆ ತೀವ್ರವಾಗಿ ಬಡಿದ ಸಿಡಿಲಿಗೆ ಸಿಲುಕಿದ ಸಾಯಿನಾಥ್ ಘುಗೆ ಎಂಬ 26 ವರ್ಷದ ರೈತ ಮೃತಪಟ್ಟಿದ್ದು, ಆತನ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ನಿರಂತರ ಮಳೆಯಿಂದಾಗಿ ತೀವ್ರ ಜಲಾವೃತವಾಗಿದೆ. ಶುಕ್ರವಾರ ಮಧ್ಯರಾತ್ರಿಯಿಂದ ನಾಗ್ಪುರ ನಗರದಲ್ಲಿ ಭಾರೀ ಮಳೆ ಸುರಿದಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಸದ್ಯ ಸರ್ಕಾರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕ್ರಮಗಳನ್ನು ಕೈಗೊಂಡಿದೆ.