

ಹೈದರಾಬಾದ್: ಮೂರನೇ ಮಗುವನ್ನು ಹೊಂದುವ ಕುಟುಂಬಕ್ಕೆ 50 ಸಾವಿರ ರೂ. ಬಹುಮಾನ ನೀಡುವುದಾಗಿ ತೆಲುಗುದೇಶಂ ಪಕ್ಷದ ಸಂಸದರು ಘೋಷಣೆ ಮಾಡಿದ್ದಾರೆ.
ಎರಡು ಮಕ್ಕಳನ್ನು ಹೊಂದಿರುವವರು ಮೂರನೇ ಹೆರಿಗೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರೆ ತಮ್ಮ ವೇತನದಿಂದ 50 ಸಾವಿರ ರೂ., ಗಂಡು ಮಗುವಿಗೆ ಜನ್ಮ ನೀಡಿದರೆ ಹಸುವನ್ನು ಉಡುಗೊರೆಯಾಗಿ ನೀಡಲಾಗುವುದು ಎಂದು ಟಿಡಿಪಿ ಸಂಸದ ಕಲಿಶೆಟ್ಟಿ ಅಪ್ಪಲನಾಯ್ಡು ಘೋಷಿಸಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಭರವಸೆ ನೀಡಿದ್ದಾರೆ. ಆಂಧ್ರಪ್ರದೇಶದಲ್ಲಿ ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ಟಿಡಿಪಿ ಹಿರಿಯ ನಾಯಕರು ಯುವಜನತೆಯ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸುತ್ತಿದ್ದು, ಅದನ್ನು ಹೆಚ್ಚಿಸುವ ಅಗತ್ಯದ ಬಗ್ಗೆ ಒತ್ತು ನೀಡುತ್ತಿದ್ದಾರೆ. ಈ ಮಧ್ಯೆ ಸಂಸದರು ನೀಡಿರುವ ಭರವಸೆಯ ವೀಡಿಯೊ ವೈರಲ್ ಆಗಿದೆ.