50 ಲಕ್ಷ ರೂ. ವಂಚನೆ; ವೃದ್ಧ ದಂಪತಿ ಕತ್ತು ಕುಯ್ದುಕೊಂಡು ಆತ್ಮಹತ್ಯೆ! | Fraud

dk - 2025-03-29T123655.808
Published on

Fraud : ಸೈಬರ್​ ವಂಚಕರಿಂದ 50 ಲಕ್ಷ ರೂ. ಕಳೆದುಕೊಂಡ ಹಿನ್ನೆಲೆ ವೃದ್ಧ ದಂಪತಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದಿದೆ.

ದಿಯಂಗೊ ನಜರತ್ (83) ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡರೆ, ಅವರ ಪತ್ನಿ ಪ್ಲೇವಿಯಾನಾ ನಜರತ್ (79) ವಿಷ ಸೇವಿಸಿದ್ದಾರೆ. ದೆಹಲಿ ಅಪರಾಧ ವಿಭಾಗದ ಅಧಿಕಾರಿಗಳೆಂದು ಹೇಳಿಕೊಂಡು ವಂಚಕರು ಬೆದರಿಕೆ ಹಾಕಿದ್ದಾರೆ ಈ ಹಿನ್ನೆಲೆ ವೃದ್ಧ ದಂಪತಿಗಳು ತಮ್ಮ ಹತಾಶೆ ಮತ್ತು ಭಯವನ್ನು ವಿವರಿಸಿ ಆತ್ಮಹತ್ಯೆ ಪತ್ರವನ್ನು(ಡೇತ್​ನೋಟ್​) ಬರೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆತ್ಮಹತ್ಯೆಗೆ ಕಾರಣ..?

ಇನ್ನು ವಂಚಕರು ವೀಡಿಯೊ ಕರೆಯ ಮೂಲಕ ದಂಪತಿಯನ್ನು ಸಂಪರ್ಕಿಸಿದ್ದಾರೆ. ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಸುಳ್ಳು ಆರೋಪ ಹೊರಿಸಿದ್ದಾರೆ. ಸೈಬರ್ ವಂಚಕರು ದಂಪತಿಗಳ ಮೊಬೈಲ್ ಸಂಖ್ಯೆ ಮತ್ತು ಗುರುತಿನ ಚೀಟಿಯನ್ನು ಕದ್ದಿದ್ದಾರೆ ಎಂದು ಹೇಳಿಕೊಂಡು, ಇತ್ಯರ್ಥ ಶುಲ್ಕವಾಗಿ 5 ಲಕ್ಷ ರೂ.ಗಳನ್ನು ಬೇಡಿಕೆ ಇಟ್ಟಿದ್ದಾರೆ. ಬೇದರಿದ ದಂಪತಿಗಳು ಮೊತ್ತವನ್ನು ಪಾವತಿಸಿದರು. ಅಲ್ಲಿಗೆ ಕಿರುಕುಳ ನಿಲ್ಲಲಿಲ್ಲ. ವಂಚಕರು ಬೆದರಿಕೆ ಹಾಕುತ್ತಾ ಮತ್ತು ಅವರಿಂದ ಹೆಚ್ಚಿನ ಹಣವನ್ನು ಸುಲಿಗೆ ಮಾಡುತ್ತಲೇ ಇದ್ದರು, ಇದರಿಂದಾಗಿ ಒಟ್ಟು 50 ಲಕ್ಷ ರೂ.ಗಳಿಗೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಮೃತ ದಿಯಂಗೊ ನಜರತ್ ಮಹಾರಾಷ್ಟ್ರ ಸಚಿವಾಲಯದಲ್ಲಿ ನಿವೃತ್ತರಾಗಿದ್ದ ನೌಕರನಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net