ಕೇಂದ್ರ ಬಜೆಟ್​ 2020: ಕ್ರೀಡೆಗೆ 50 ಕೋಟಿ ರೂಪಾಯಿ ಹೆಚ್ಚುವರಿ

SPORTS
Published on

ಕ್ರೀಡಾಕ್ಷೇತ್ರಕ್ಕೆ ಪ್ರಸಕ್ತ ಸಾಲಿನ ಬಜೆಟ್​ನಲ್ಲಿ ಹೆಚ್ಚುವರಿ 50 ಕೋಟಿ ರೂಪಾಯಿ ನೀಡಲಾಗಿದೆ. ಇದರಿಂದ ವಾರ್ಷಿಕ ಕ್ರೀಡಾ ಬಜೆಟ್ 2826.92 ಕೋಟಿ ರೂಪಾಯಿಗೆ ಏರಿಕೆಯಾಗಿದೆ. 2019-20ನೇ ಸಾಲಿನ ಬಜೆಟ್​ನಲ್ಲಿ 2216.92 ಕೋಟಿ ಮೀಸಲಿರಿಸಲಾಗಿತ್ತಾದರೂ ಬಳಿಕ 2776.92 ಕೋಟಿಗೆ ಪರಿಷ್ಕರಿಸಲಾಗಿತ್ತು.

ಜತೆಗೆ ರಾಷ್ಟ್ರೀಯ ಕ್ರೀಡಾ ಫೆಡರೇಷನ್​ಗಳಿಗೆ ಮೀಸಲಿಟ್ಟಿದ್ದ ಅನುದಾನದಲ್ಲಿ ಕಡಿತಗೊಳಿಸಲಾಗಿದೆ. ಕ್ರೀಡಾಪಟುಗಳ ಪಾಲಿಗೆ ನೋಡಲ್ ಕೇಂದ್ರವಾಗಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ ಅನುದಾನದಲ್ಲೂ ಕಡಿತ ಮಾಡಲಾಗಿದೆ.

ಪ್ರಮುಖ ಅಂಶಗಳು: =ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಖೇಲೋ ಇಂಡಿಯಾ ಕಾರ್ಯಕ್ರಮಕ್ಕೆ 291.42 ಕೋಟಿ ರೂ.ಗೆ ಏರಿಕೆ =ಕ್ರೀಡಾಪಟುಗಳಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹಧನ 111 ಕೋಟಿ ರೂ.ನಿಂದ 70 ಕೋಟಿ ರೂ.ಗೆ ಇಳಿಕೆ =ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ (ಸಾಯ್) ಮೀಸಲಾಗಿದ್ದ 615 ಕೋಟಿ ರೂ.ನಿಂದ 500 ಕೋಟಿ ರೂ.ಗೆ ಇಳಿಕೆ.

ಸಾಯ್ ಕೇಂದ್ರವೂ ರಾಷ್ಟ್ರೀಯ ಶಿಬಿರಗಳನ್ನು ಆಯೋಜಿಸುವ, ಕ್ರೀಡಾಪಟುಗಳಿಗೆ ಮೂಲಭೂತ ಸೌಕರ್ಯ ಒದಿಗಿಸುವುದು, ಇನ್ನಿತರ ವ್ಯವಸ್ಥೆಗಳನ್ನು ಒದಗಿಸುವ ನೋಡಲ್ ಸಂಸ್ಥೆಯಾಗಿದೆ. ರಾಷ್ಟ್ರೀಯ ಕ್ರೀಡಾ ಫೆಡರೇಷನ್​ಗಳಿಗೆ ಮೀಸಲಿಟ್ಟಿದ್ದ ಮೊತ್ತದಲ್ಲಿ 55 ಕೋಟಿ ರೂ. ಕಡಿತ. 2019-20ನೇ ಸಾಲಿನಲ್ಲಿ ಮೀಸಲಿಟ್ಟಿದ್ದ 300.85 ಕೋಟಿ ರೂ.ಗಳಲ್ಲಿ 245 ಕೋಟಿ ರೂ.ಗೆ ಇಳಿಕೆ.

ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿಗೆ ಮೀಸಲಾಗಿದ್ದ 77.15 ಕೋಟಿ ರೂ.ನಿಂದ 50 ಕೋಟಿ ರೂ.ಗೆ ಇಳಿಕೆ 2010 ಕಾಮನ್ವೆಲ್ತ್ ಗೇಮ್್ಸ ಕ್ರೀಡಾಂಗಣ ಹಾಗೂ ಸಾಯ್ ಸ್ಟೇಡಿಯಂ ನವೀಕರಣಕ್ಕೆ ನೀಡಲಾಗಿದ್ದ 96 ಕೋಟಿ ರೂ.ನಿಂದ 75 ಕೋಟಿ ರೂ.ಗೆ ಇಳಿಕೆ. ಕ್ರೀಡಾಪಟುಗಳ ರಾಷ್ಟ್ರೀಯ ಕಲ್ಯಾಣ ನಿಧಿಗೆ ಮೀಸಲಾಗಿದ್ದ 2 ಕೋಟಿ ರೂ. ಮುಂದುವರಿಕೆ ಕ್ರೀಡಾ ಅಭಿವೃದ್ಧಿ ಹಾಗೂ ಇನ್ನಿತರ ಮೂಲ ಸೌಕರ್ಯ ಒದಗಿಸಲು ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ 50 ಕೋಟಿ ರೂ. ಮುಂದುವರಿಕೆ ಮಧ್ಯಪ್ರದೇಶದಲ್ಲಿರುವ ಲಕ್ಷ್ಮೀ ಬಾಯಿ ರಾಷ್ಟ್ರೀಯ ದೈಹಿತ ಶಿಕ್ಷಣ ಸಂಸ್ಥೆಗೆ 55 ಕೋಟಿ ರೂ., ಕಳೆದ ಬಾರಿಗಿಂತ 5 ಕೋಟಿ ರೂ. ಹೆಚ್ಚುವರಿ ಮೊತ್ತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net