ಬಸ್ ಚಾಲಕನಿಗೆ 5 ಸಾವಿರ ರೂ. ದಂಡ

bus driver talk to mobile
ಮೊಬೈಲ್‌ನಲ್ಲಿ ಮಾತನಾಡುತ್ತಲೇ ಬಸ್ ಚಲಾಯಿಸಿದ ಚಾಲಕ.
Published on

ಶಿವಮೊಗ್ಗ: ಮೊಬೈಲ್‌ನಲ್ಲಿ ಮಾತನಾಡುತ್ತಲೇ ಸಾಗರ ರಸ್ತೆಯಲ್ಲಿ ಬಸ್ ಚಲಾಯಿಸಿದ ಚಾಲಕನಿಗೆ ಶಿವಮೊಗ್ಗ ಸಂಚಾರ ಪೊಲೀಸರು ಬಿಸಿ ಮುಟ್ಟಿಸಿದ್ದು ಬರೋಬ್ಬರಿ 5 ಸಾವಿರ ರೂ. ದಂಡ ಹಾಕಿದ್ದಾರೆ.

ಸಾಗರ-ಶಿವಮೊಗ್ಗ ನಡುವೆ ಸಂಚರಿಸುವ ಖಾಸಗಿ ಬಸ್‌ನ ಚಾಲಕ, ಸಕ್ರೆಬೈಲ್‌ನ ಮನ್ಸೂರ್ ಅಲಿ ದಂಡ ಕಟ್ಟಿದವರು. ಗುರುವಾರ ಖಾಸಗಿ ಬಸ್ ಚಾಲಕ(ಮನ್ಸೂರ್ ಅಲಿ) ಮೊಬೈಲ್‌ನಲ್ಲಿ ಮಾತನಾಡುತ್ತಲೇ ಬಸ್ ಚಲಾಯಿಸುತ್ತಿದ್ದ ವಿಡಿಯೋವನ್ನು ಪ್ರಯಾಣಿಕರೊಬ್ಬರು ಶಿವಮೊಗ್ಗ ಸಂಚಾರ ಠಾಣೆ ಪೊಲೀಸರ ವಾಟ್ಸ್‌ಆ್ಯಪ್‌ಗೆ ಕಳುಹಿಸಿ ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ಆತನ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದರು.
ಈ ವಿಡಿಯೋ ಪರಿಶೀಲಿಸಿದ ಸಂಚಾರ ಠಾಣೆ ವೃತ್ತ ನಿರೀಕ್ಷಕ ಸಂತೋಷ್‌ಕುಮಾರ್ ಅವರು ಸಂಚಾರ ನಿಯಮ ಉಲ್ಲಂಘನೆ ಮಾಡಿ ಮೊಬೈಲ್ನಲ್ಲಿ ಮಾತನಾಡುತ್ತಾ ಬಸ್ ಚಾಲನೆ ಮಾಡಿದ್ದ ಮನ್ಸೂರ್ ಅಲಿ ವಿರುದ್ಧ ಐಎಂವಿ ಕಾಯ್ದೆಯಡಿ ಪ್ರಕರಣ ದಾಖಲಿಸಿ 5 ಸಾವಿರ ರೂ. ದಂಡ ವಿಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net