ಕ್ಯಾಥೋಲಿಕ್ ಪಾದ್ರಿಗಳಿಂದ 5 ಸಾವಿರ ಮಕ್ಕಳ ಮೇಲೆ ದೌರ್ಜನ್ಯ

5478
Published on

ಲಿಸ್ಬೆನ್: ಪೋರ್ಚುಗಲ್​ನಲ್ಲಿ 1950ರಿಂದ ಇಲ್ಲಿಯವರೆಗೆ ಕ್ಯಾಥೋಲಿಕ್ ಪಾದ್ರಿಗಳು ಸುಮಾರು 5 ಸಾವಿರ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ ನಡೆಸಿದ್ದಾರೆ ಎಂದು ತನಿಖಾ ಆಯೋಗವೊಂದು ತಿಳಿಸಿದೆ.

ಪಾದ್ರಿಗಳ ಲೈಂಗಿಕ ಕಿರುಕುಳದ ಬಗ್ಗೆ ಪೋರ್ಚುಗೀಸ್​ನ ಕ್ಯಾಥೋಲಿಕ್ ಚರ್ಚ್ ಒಕ್ಕೂಟ ರಚಿಸಿದ್ದ ಸ್ವತಂತ್ರ ತನಿಖಾ ಆಯೋಗವು ಈ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಹಗರಣವನ್ನು ನಿಭಾಯಿಸಲು ಜಗತ್ತಿನ ಎಲ್ಲ ಕ್ಯಾಥೋಲಿಕ್ ಚರ್ಚ್​ಗಳ ಮುಖ್ಯ ಪಾದ್ರಿಯಾಗಿರುವ ಪೋಪ್ ಫ್ರಾನ್ಸಿಸ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಆಯೋಗವು ಕಳೆದ ಒಂದು ವರ್ಷದಲ್ಲಿ 500ಕ್ಕೂ ಹೆಚ್ಚು ಸಂತ್ರಸ್ತೆಯರನ್ನು ಪತ್ತೆ ಹಚ್ಚಿ ಅವರ ಹೇಳಿಕೆಗಳನ್ನು ದಾಖಲಿಸಿದೆ. ಬಹುತೇಕ ಪ್ರಕರಣಗಳು ಪೊಲೀಸ್ ಠಾಣೆಯ ಮೆಟ್ಟಿಲ್ಲನ್ನೂ ಏರಿಲ್ಲ ಎಂದು ಆಯೋಗ ಹೇಳಿದೆ. ಕ್ಯಾಥೋಲಿಕ್ ಚರ್ಚ್​ಗಳ ಪ್ರಭಾವ ಜಾಸ್ತಿ ಇರುವ ಇತರೆ ದೇಶಗಳಲ್ಲೂ ಈ ರೀತಿಯ ದೌರ್ಜನ್ಯ ಹೆಚ್ಚಾಗಿದೆ ಎಂದು ತನಿಖಾ ಆಯೋಗದ ಅಧ್ಯಕ್ಷ ಪೆಡ್ರೊ ಸ್ಟ್ರೆಚ್ಟ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net