

Bad Luck : ಹಿಂದು ಧರ್ಮವು ಪ್ರಾಚೀನ ಧರ್ಮಗಳಲ್ಲಿ ಒಂದಾಗಿದೆ. ನಾವು ಬೆಳಗ್ಗೆ ಎದ್ದಾಗಿನಿಂದ ಹಿಡಿದು ರಾತ್ರಿ ಮಲಗುವ ತನಕ ಮಾಡಬೇಕಾದ ಎಲ್ಲವನ್ನೂ ಹಿಂದು ಧರ್ಮಗ್ರಂಥಗಳು ಮತ್ತು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಧಾರ್ಮಿಕ ಗ್ರಂಥಗಳು ಜಗತ್ತಿಗೆ ಅನೇಕ ಬೋಧನೆಗಳನ್ನು ನೀಡಿವೆ. ಗ್ರಂಥ ಅಥವಾ ಶಾಸ್ತ್ರಗಳಲ್ಲಿ ಇರುವ ನಿಯಮಗಳನ್ನು ನಾವು ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ಸಮಯದವರೆಗೆ ಅನುಸರಿಸಬೇಕಿದೆ.
ಅಂದಹಾಗೆ ಹಿಂದೂ ಧರ್ಮದ ಪ್ರಕಾರ, ಐದು ನಿರ್ದಿಷ್ಟ ಸ್ಥಳಗಳಿಗೆ ಭೇಟಿ ನೀಡುವಾಗ ಬರಿಗೈಯಲ್ಲಿ ಹೋಗಬಾರದು ಎಂದು ಹೇಳಲಾಗಿದೆ. ಒಂದು ವೇಳೆ ಬರಿಗೈಯಲ್ಲಿ ಹೋದರೆ ದುರಾದೃಷ್ಟ ಆವರಿಸಿಕೊಳ್ಳುತ್ತದೆ ಎಂದು ನಂಬಲಾಗಿದೆ. ಹಾಗಾದರೆ ಆ ಐದು ಸ್ಥಳಗಳು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಹಿಂದು ನಂಬಿಕೆಗಳ ಪ್ರಕಾರ ಯಾವುದೇ ಕಾರಣಕ್ಕೂ ಬರಿಗೈಯಲ್ಲಿ ದೇವಸ್ಥಾನಗಳಿಗೆ ಹೋಗಬಾರದು. ದೇವರಿಗಾಗಿ ಕೈಯಲ್ಲಿ ಏನನ್ನಾದರೂ ಒಯ್ಯಬೇಕು. ಮಾಮೂಲಿ ಹೂವಾದರೂ ಪರವಾಗಿಲ್ಲ ಎಂದು ಹಿಂದು ಧರ್ಮದಲ್ಲಿ ಹೇಳಲಾಗಿದೆ. ಇದರಿಂದ ನಿಮಗೆ ಎದುರಾಗುವ ವಿಘ್ನಗಳು ದೂರವಾಗುತ್ತವೆ.
ನೀವು ಬಹಳ ಸಮಯದ ನಂತರ ನಿಮ್ಮ ಶಿಕ್ಷಕರನ್ನು ನೋಡಲು ಅವರ ಮನೆಗೆ ಭೇಟಿ ನೀಡಿದರೆ, ಏನಾದರೂ ಉಡುಗೊರೆಯನ್ನು ತೆಗೆದುಕೊಂಡು ಹೋಗುವುದು ಒಳ್ಳೆಯದು. ಕಡಿಮೆ ಬೆಲೆಯಾದರೂ ಪರವಾಗಿಲ್ಲ, ಏನಾದರೂ ಉಡುಗೊರೆ ತೆಗೆದುಕೊಂಡು ಹೋಗಿ. ಅದು ನಿಮ್ಮ ಗುರುವಿಗೆ ನೀವು ನೀಡುವ ಗೌರವ ಆಗಿರುತ್ತದೆ. ಅದರಿಂದ ನಿಮಗೆ ಶುಭವಾಗಲಿದೆ.
ನಿಮ್ಮ ಜೊತೆಯಲ್ಲಿ ಹುಟ್ಟಿ ಬೆಳೆದ ನಿಮ್ಮ ಸಹೋದರಿ ಮದುವೆಯಾಗಿ ಗಂಡನ ಮನೆಗೆ ಹೋಗುತ್ತಾಳೆ. ನೀವು ಯಾವಾಗಾಲಾದರೂ ಭೇಟಿ ಮಾಡಲು ಅವರ ಮನೆಗೆ ಹೋದರೆ ಬರಿಗೈಯಲ್ಲಿ ಹೋಗಬಾರದು. ಹೋದರೆ ದುರಾದೃಷ್ಟ ನಿಮ್ಮನ್ನು ಹಿಂಬಾಲಿಸುತ್ತದೆ. ಹೀಗಾಗಿ ಏನಾದರೂ ಉಡುಗೊರೆಯನ್ನು ತೆಗೆದುಕೊಂಡು ಹೋಗಿ. ಇದು ನಿಮಗೆ ಅನೇಕ ವಿಧಗಳಲ್ಲಿ ಅದೃಷ್ಟವನ್ನು ತರುತ್ತದೆ.
ನೀವು ಮಗಳ ಪಾಲಕರಾಗಿದ್ದರೆ, ಬಹಳ ಸಮಯದ ನಂತರ ನಿಮ್ಮ ಮಗಳನ್ನು ನೀವು ಭೇಟಿ ಮಾಡಲು ಹೋಗುತ್ತಿದ್ದರೆ ಏನಾದರೂ ಉಡುಗೊರೆ ಖರೀದಿ ಮಾಡಿ ಹೋಗಿ ಅಥವಾ ಬಾಳೆಹಣ್ಣುಗಳನ್ನು ತೆಗೆದುಕೊಂಡು ಹೋಗಿ. ಈ ರೀತಿ ಮಾಡುವುದರಿಂದ ನಿಮ್ಮ ಮಗಳ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.
ನೀವು ಬಹಳ ಸಮಯದ ನಂತರ ನಿಮ್ಮ ಸ್ನೇಹಿತರನ್ನು ಭೇಟಿ ಮಾಡಲು ಅವರ ಹೋದರೆ, ನೀವು ಅವರಿಗೆ ಉಡುಗೊರೆಯನ್ನು ತೆಗೆದುಕೊಂಡು ಹೋಗಬೇಕು. ಇಲ್ಲವಾದರೆ, ಕೆಲವು ಸಿಹಿತಿಂಡಿಗಳನ್ನು ಖರೀದಿಸಿ. ಈ ರೀತಿ ಮಾಡುವುದರಿಂದ ನಿಮಗೆ ಅದೃಷ್ಟ ತರುತ್ತದೆ ಎಂದು ಹಿಂದು ಧರ್ಮದಲ್ಲಿ ನಂಬಲಾಗಿದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ. ಹಾಗೆಯೇ ಮೇಲಿನ ನಿಯಮಗಳು ಸಾಂಪ್ರದಾಯಿಕ ಚಿಂತನೆಯನ್ನು ಆಧರಿಸಿವೆ ಹೊರತು ವಿಜ್ಞಾನದಿಂದ ಬೆಂಬಲಿತವಾಗಿಲ್ಲ.