ಲಾರಿಗೆ ಡಿಕ್ಕಿ ಹೊಡೆದು ಕಾಲುವೆಗೆ ಉರುಳಿದ Bus​; 5 ಮಂದಿ ಸಾವು, 25ಕ್ಕೂ ಅಧಿಕ ಮಂದಿಗೆ ಗಾಯ

Bus Accident
Published on

ಅಮೃತಸರ: ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸೊಂದು (Bus) ಕಾಲುವೆಗೆ ಉರುಳಿ ಐದು ಮಂದಿ ಮೃತಪಟ್ಟು, 25ಕ್ಕೂ ಅಧಿಕ ಜನರು ಗಂಭೀರವಾಗು ಗಾಯಗೊಂಡಿರುವ ಘಟನೆ ಪಂಜಾಬಿನ ಫರೀದ್​ಕೋಟ್​ ಜಿಲ್ಲೆಯಲ್ಲಿ ನಡೆದಿದೆ.

ಘಟನೆ ಕುರಿತು ಮಾತನಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಜ್ಞಾ ಜೈನ್, ಫರೀದ್​ಕೋಟ್​ನಿಂದ ಬಸ್​ (Bus) ಅಮೃತಸರಕ್ಕೆ ತೆರಳುತ್ತಿದ್ದಾಗ ಕೊಟ್ಕಾಪುರದ ಬಳಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾಲುವೆಗೆ ಉರುಳಿ ಅಪಘಾತ ಸಂಭವಿಸಿದೆ. 

ಚಾಲಕನ ನಿಯಂತ್ರಣ ತಪ್ಪಿ ಬಸ್​ (Bus) ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಕಾಲುವೆಯಿಂದ ಬಸ್ಸನ್ನು ಹೊರತೆಗೆಯಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಿಗಾ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಜ್ಞಾ ಜೈನ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net