ಆರ್.ಎಂ.ಸಿ ಯಾರ್ಡ್ ಬಳಿ 5 ಆನೆ ದಂತ ಮಾರಾಟ, ಆರೋಪಿ ಸೆರೆ

elephant
Published on

ಬೆಂಗಳೂರು: ಆನೆದಂತ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಆರ್‌ಎಂಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.

ಜೆ.ಸಿ.ನಗರದ ಶ್ರೀಶೈಲ (25) ಬಂಧಿತ. 7.42 ಕೆಜಿಯ 5 ಆನೆ ದಂತದ ತುಂಡುಗಳನ್ನು ಜಪ್ತಿ ಮಾಡಲಾಗಿದೆ. ಯಶವಂತಪುರ ಕೈಗಾರಿಕಾ ಪ್ರದೇಶದಉಲ್ಲಾಸ್ ರಸ್ತೆಯಲ್ಲಿ ಗುರುವಾರ ಬೆಳಗ್ಗೆ 6.30ರಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಆನೆ ದಂತ ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀಶೈಲನಿಗೆ ಒಂದ ವರ್ಷದ ಹಿಂದೆ ಆತನ ಸ್ನೇಹಿತ ಶಮಿವುದ್ದೀನ್ ಎಂಬಾತ ಈ ಆನೆ ದಂತಗಳನ್ನು ನೀಡಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ಶಮಿವುದ್ದೀನ್ ಬಂಧನದ ಬಳಿಕ ಆನೆ ದಂತದ ರಹಸ್ಯ ಬಯಲಾಗಲಿದೆ.

ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ಶಮಿವುದ್ದೀನ್ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net