ಇಂದಿನಿಂದ 5 ದಿನ ಕಾರ್ಯಾಚರಣೆ

9-cpt-1pl
Published on

ಚನ್ನಪಟ್ಟಣ: ತಾಲೂಕಿನ ಗಡಿಯಂಚಿನ ತೆಂಗಿನಕಲ್ಲು ಮತ್ತು ಕಬ್ಬಾಳು ಅರಣ್ಯಪ್ರದೇಶ ವ್ಯಾಪ್ತಿಯಲ್ಲಿ ಬೇರೆ ಬೇರೆ ಗುಂಪುಗಳಲ್ಲಿ ಸಂಚರಿಸುತ್ತಿರುವ 23 ಅನೆಗಳು ಈ ಭಾಗದ ಜನತೆಯ ನಿದ್ದೆಗೆಡಿಸಿವೆ. ಈ ಭಾಗದ ರೈತರು ಅನೆ ದಾಳಿಯ ಉಪಟಳದಿಂದ ಬೇಸತ್ತು, ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಗಜಪಡೆಯನ್ನು ಕಾವೇರಿ ವನ್ಯಧಾಮದತ್ತ ಓಡಿಸಲು ಅರಣ್ಯ ಇಲಾಖೆ ಮುಂದಾಗಿದೆ.

ಅದರಂತೆ ಗುರುವಾರದಿಂದ 5 ದಿನ ಕಾರ್ಯಾಚರಣೆ ಹಮ್ಮಿಕೊಂಡಿದೆ. ಇದಕ್ಕಾಗಿ ರಾಮನಗರದ ಕೈಲಾಂಚ, ಚನ್ನಪಟ್ಟಣದ ವಿರೂಪಾಕ್ಷಿಪುರ ಹಾಗೂ ಕನಕಪುರದ ಸಾತನೂರು ಹೋಬಳಿಗಳ ಜನತೆ ಸಹಕರಿಸುವಂತೆ ಅರಣ್ಯ ಉಪಸಂರಕ್ಷಣಾಧಿಕಾರಿ ದೇವರಾಜು ಮನವಿ ಮಾಡಿದ್ದಾರೆ. ಭಾಗಗಳ ಜನತೆ ಹಗಲು ಮತ್ತು ರಾತ್ರಿ ವೇಳೆಯಲ್ಲಿ ಜಾಗ್ರತೆವಹಿಸುವಂತೆ ಮನವಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net